Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

‘ವೀಡಿಯೋ’ ಜೊತೆಗೆ ಬಂದ ದೀಕ್ಷಿತ್‍ ಶೆಟ್ಟಿ; ‘ಬ್ಲಿಂಕ್‍’ ತಂಡದ ಹೊಸ ಪ್ರಯತ್ನ

kannada new movie video

‘ಬ್ಲಿಂಕ್’ ಯಶಸ್ಸಿನ ನಂತರ ಮತ್ತೆ ಒಂದಾದ ದೀಕ್ಷಿತ್ ಶೆಟ್ಟಿ ಹಾಗೂ ಶ್ರೀನಿಧಿ ಬೆಂಗಳೂರು ಇದೀಗ ‘ವಿಡಿಯೋ’ ಎಂಬ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಚಿತ್ರದ ಮೂಲಕ ದೀಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಧೀ ಸಿನಿಮಾಸ್ ಹೆಸರಿನ ಈ ಸಂಸ್ಥೆಯ ಮೊದಲ ಚಿತ್ರವಾಗಿ ‘ವೀಡಿಯೋ’ ಬರಲಿದೆ.

ಈ ಚಿತ್ರವು Found Footage Genre ಚಿತ್ರವಾಗಿದ್ದು, Vlog ಮತ್ತು Documentary ಶೈಲಿಯದ್ದಾಗಿದೆ. ಈಗಾಗಲೇ ಶೇ. 80ರಷ್ಟು ಭಾಗದ ಚಿತ್ರೀಕರಣ ಮುಗಿಸಿದ್ದು, ಆದಷ್ಟು ಬೇಗ ಚಿತ್ರ ಬಿಡುಗಡೆಯಾಗಲಿದೆ. ಭಾರತದಲ್ಲಿ ಈ ತರಹದ ಪ್ರಯತ್ನಗಳಾಗಿರುವುದು ಕಡಿಮೆಯೇ. ಕನ್ನಡದಲ್ಲೂ ‘6-5=2’ ನಂತರ ಯಾರೂ ಈ ತರಹದ್ದೊಂದು ಪ್ರಯತ್ನ ಮಾಡಿರಲಿಲ್ಲ.

ಈ ಚಿತ್ರಕ್ಕೆ ಐದಾರು ಕ್ಯಾಮೆರಾಗಳನ್ನು ಸತತವಾಗಿ ಬಳಸಿ ಚಿತ್ರೀಕರಣ ಮಾಡಲಾಗುತ್ತಿದೆ. ಇದೊಂದು ವ್ಲಾಗರ್‍ನ ಕಥೆಯಾಗಿದ್ದು, ಒಂದು ಹಾಂಟೆಡ್‍ ಸ್ಥಳಕ್ಕೆ ವ್ಲಾಗರ್ ಹೋದಾಗ, ಅಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರ ಹೇಳುತ್ತದಂತೆ.

ಈ ಕುರಿತು ಮಾತನಾಡುವ ಶ್ರೀನಿಧಿ, ‘ನನ್ನ ಮೊದಲ ಚಿತ್ರ ‘ಬ್ಲಿಂಕ್‍’ ಚಿತ್ರ ಜನರ ಮೆಚ್ಚುಗೆ ಪಡೆಯಿತು. ಆದರೆ, ಅದಕ್ಕೆ ಒಂದು ಸೀಮಿತವಾದ ಪ್ರೇಕ್ಷಕವರ್ಗ ಇತ್ತು. ಈ ಚಿತ್ರವನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ, ಅದರಲ್ಲೂ ಯುವಕರು ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಬೇಕೆಂದು ಒಂದು ಬೇರೆ ಶೈಲಿಯ ಕಥೆ ಮಾಡಿಕೊಂಡಿದ್ದೇನೆ’ ಎಂದು ಹೇಳುತ್ತಾರೆ.

ಕಳೆದ 11 ವರ್ಷಗಳಿಂದ ನಟನಾಗಿ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸುತ್ತಿರುವ ದೀಕ್ಷಿತ್ ಶೆಟ್ಟಿ ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ನಿರ್ಮಾಪಕರನ್ನು ಹೊರತುಪಡಿಸಿದರೆ ‘ಬ್ಲಿಂಕ್‍’ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಇಲ್ಲೂ ಕೆಲಸ ಮಾಡಲಿದೆಯಂತೆ.

ಆ ಚಿತ್ರದಲ್ಲಿ ನಾಯಕನಾಗಿದ್ದ ದೀಕ್ಷಿತ್‍ ಶೆಟ್ಟಿ, ಇಲ್ಲೂ ನಾಯಕನಾಗಿದ್ದು, ಜೊತೆಗೆ ಐವರು ಹೊಸ ನಟ-ನಟಿಯರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅವಿನಾಶ್‍ ಶಾಸ್ತ್ರಿ ಛಾಯಾಗ್ರಹಣ ಮತ್ತು ಪ್ರಸನ್ನ ಕುಮಾರ್ ಸಂಗೀತವಿದೆ.

Tags:
error: Content is protected !!