Mysore
14
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ವೆಬ್ ಸೀರಿಸ್‍ನಲ್ಲಿ ದೀಕ್ಷಿತ್ ಶೆಟ್ಟಿ; ಜಿಯೋ ಹಾಟ್‍ಸ್ಟಾರ್‍ನಲ್ಲಿ ‘ಟಚ್ ಮಿ ನಾಟ್‍’

‘ದಿಯಾ’ ಚಿತ್ರದ ನಂತರ ದೀಕ್ಷಿತ್‍ ಶೆಟ್ಟಿ ಬೇರೆ ಭಾಷೆಗಳತ್ತ ಪ್ರಯಾಣ ಬೆಳೆಸಿರುವುದು ಗೊತ್ತೇ ಇದೆ. ಈಗಾಗಲೇ ಅವರು ಕೆಲವು ತೆಲುಗು ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಈಗ ಮೊದಲ ಬಾರಿಗೆ ಅವರು ವೆಬ್‍ ಸರಣಿಯಲ್ಲಿ ಅಭಿನಯಿಸಿದ್ದು, ಈ ವೆಬ್‍ ಸರಣಿಯು ಇತ್ತೀಚೆಗೆ ಬಿಡುಗಡೆಯಾಗಿದೆ.

ಅಂದ ಹಾಗೆ, ದೀಕ್ಷಿತ್‍ ನಟಿಸಿರುವ ವೆಬ್‍ ಸರಣಿಯ ಹೆಸರು ‘ಟಚ್‍ ಮಿ ನಾಟ್‍’ ಇದೀಗ ಜಿಯೋ ಹಾಟ್‍ಸ್ಟಾರ್‍ ಓಟಿಟಿಯಲ್ಲಿ ಸ್ಟ್ರೀಮ್‍ ಆಗುತ್ತಿದೆ. ಇದು ತೆಲುಗು ವೆಬ್‍ ಸರಣಿಯಾಗಿದ್ದು, ಬೇರೆ ಭಾಷೆಗಳಲ್ಲೂ ಲಭ್ಯವಿದೆ.

ಇದೊಂದು ಕ್ರೈಮ್‍ ಥ್ರಿಲ್ಲರ್‍ ವೆಬ್‍ ಸರಣಿಯಾಗಿದ್ದು, ರಿಷಿ ಎಂಬ ಅಲೌಕಿಕ ಸಾಮರ್ಥ್ಯ ಹೊಂದಿರುವ ಯುವಕನ ಸುತ್ತ ಸುತ್ತತ್ತದೆ. ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸುವ ತಂಡದ ಭಾಗವಾಗಿರುವ ಆತ, ತನಗೆ ಅರಿವಿಲ್ಲದಂತೆಯೇ ನಿಗೂಢ ಕೊಲೆಗಾರನ ಗುರಿಯಾಗುತ್ತಾನೆ. ಅದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದು ಈ ವೆಬ್‍ ಸರಣಿಯ ಕಥೆ.

2020ರಲ್ಲಿ ಬಿಡಗಡೆಯಾದ ‘ದಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ದೀಕ್ಷಿತ್‍ ಶೆಟ್ಟಿ, ಮರುವರ್ಷವೇ ತೆಲುಗಿನಲ್ಲಿ ‘ಮುಗ್ಗುರು ಮೊನಗಾಳ್ಳು’ ಮತ್ತು ‘ದಿ ರೋಸ್‍ ವಿಲ್ಲಾ’ ಚಿತ್ರಗಳಲ್ಲಿ ನಟಿಸಿದರು. ನಾನಿ ಅಭಿನಯದ ‘ದಸರಾ’ ಅವರಿಗೆ ಹೆಸರು ತಂದುಕೊಟ್ಟ ಚಿತ್ರ. ಈ ಮಧ್ಯೆ, ಕಳೆದ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ‘ಬ್ಲಿಂಕ್‍’ ಚಿತ್ರವು ಯಶಸ್ವಿಯಾಯಿತು. ಕನ್ನಡದಲ್ಲಿ ‘ಬ್ಯಾಂಕ್‍ ಆಫ್‍ ಭಾಗ್ಯಲಕ್ಷ್ಮೀ’, ‘ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು’, ಶ್ರೀನಿಧಿ ಬೆಂಗಳೂರು ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಿರುವ ದೀಕ್ಷಿತ್‍, ತೆಲುಗಿನಲ್ಲಿ ‘ದಿ ಗರ್ಲ್‍ಫ್ರೆಂಡ್‍’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೂ ನಟಿಸುತ್ತಿದ್ದಾರೆ. ಈ ಮಧ್ಯೆ, ‘ಟಚ್‍ ಮಿ ನಾಟ್‍’ ವೆಬ್‍ ಸರಣಿ ಬಿಡುಗಡೆಯಾಗಿದೆ.

‘ಟಚ್‍ ಮಿ ನಾಟ್‍’ ವೆಬ್‍ ಸರಣಿಯು ಕೊರಿಯನ್‍ ವೆಬ್‍ ಸರಣಿಯೊಂದರ ರೀಮೇಕ್‍ ಆಗಿದ್ದು, ಇದರಲ್ಲಿ ದೀಕ್ಷಿತ್‍ ಜೊತೆಗೆ ಸಂಚಿತಾ ಪೂಣಾಚ್ಚ, ಕೋಮಾಲಿ ಪ್ರಸಾದ್‍, ಪ್ರಮೋದಿನಿ, ಬಬ್ಲೂ ಪೃಥ್ವಿರಾಜ್, ದೇವಿ ಪ್ರಸಾದ್‍ ಮುಂತಾದವರು ನಟಿಸಿದ್ದಾರೆ.

Tags:
error: Content is protected !!