ಬೆಂಗಳೂರು: ಮನೆಯೂಟ, ಹಾಸಿಗೆ, ಬಟ್ಟೆ, ಪುಸ್ತಕ ಕೋರಿ ಬಂಧಿತರಾಗಿರುವ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಗುರುವಾರ ತನ್ನ ಆದೇಶ ಪ್ರಕಟಿಸಿದ್ದು, ಮನೆಯೂಟ ನೀಡಲು ನಿರಾಕರಿಸಿದೆ.
ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬಂಧನವಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿ ನೀಡುವ ಆಹಾರ ಹೊಂದಾಣಿಕೆಯಾಗುತ್ತಿಲ್ಲ. ಊಟ ಅಜೀರ್ಣ ಹಾಗೂ ಅತಿಸಾವರವನ್ನುಂಟು ಮಾಡುತ್ತಿದೆ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ ದರ್ಶನ್‌ಗೆ ಮನೆಯೂಟ ಹಾಗೂ ಹಾಸಿಗೆ ನೀಡಲು ನಿರಾಕರಿಸಿ ಆದೇಶ ಹೊರಡಿಸಿದೆ.
ಇನ್ನು ಇದೇ ಜುಲೈ 29ರಂದು ಕೊಲೆ ಪ್ರಕರಣದ ಅರ್ಜಿ ವಿಚಾರಣೆ ಕೂಡಾ ನಡೆಯಲಿದೆ.





