ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಜೈಲು ಸಿಬ್ಬಂದಿಗಳಿಗೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಜೈಲಿನಲ್ಲಿ ಬಾಡಿ ಮೇಂಟೆನ್ಸ್ ಬಗ್ಗೆ ಯೋಚನೆ ಮಾಡುತ್ತಿರುವ ಕಿಲ್ಲಿಂಗ್ ಸ್ಟಾರ್ ದರ್ಶನ್ ಬಾಡಿ ಮೇಂಟೆನ್ಸ್ ಪೌಡರ್ ಹಾಗೂ ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದರ್ಶನ್ ಇಟ್ಟಿರುವ ಬೇಡಿಕೆಯನ್ನು ಜೈಲಾಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಜೈಲಿನಲ್ಲಿ ನೀವು ಕೇಳಿದ್ದನ್ನು ಕೊಡೋಕೆ ಅವಕಾಶ ಇಲ್ಲ. ನಿಯಮದ ಅನುಸಾರ ವಿಚಾರಣಾಧೀನ ಖೈದಿಗೆ ಯಾವ ಸೌಲಭ್ಯಗಳನ್ನು ಕೊಡಲು ಅವಕಾಶ ಇದೆಯೋ ಆ ಸೌಲಭ್ಯಗಳನ್ನು ಮಾತ್ರ ಕೊಡಲು ಸಾಧ್ಯ ಎಂದು ಹೇಳಿದ್ದಾರೆ.
ಇನ್ನು ದರ್ಶನ್ ಜೈಲಿನಲ್ಲಿ ಫಿಟ್ನೆಸ್ ಬಗ್ಗೆಯೇ ಚಿಂತೆ ಮಾಡುತ್ತಿದ್ದು, ದೇಹದಾಢ್ಯ ಸರಿಯಾಗಿ ಉಳಿಸಿಕೊಳ್ಳದಿದ್ದರೆ ನನಗೆ ಕಷ್ಟ ಆಗುತ್ತದೆ. ಈ ಹಿನ್ನೆಲೆಯಲ್ಲಿ ವಿಟಮಿನ್ ಪೌಡರ್‌ನ್ನು ಕುಟುಂಬಸ್ಥರ ಮೂಲಕ ತರಿಸಿಕೊಡಿ ಎಂದು ಮನವಿ ಮಾಡಿದ್ದು, ದರ್ಶನ್ ಮನವಿಯನ್ನು ಜೈಲಾಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ ಎನ್ನಲಾಗಿದೆ.





