ಮಂಡ್ಯ: ಮಂಡ್ಯ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಸ್ಯಾಂಟಲ್‌ವುಡ್ ಡಿಬಾಸ್ ದರ್ಶನ್ ಭರ್ಜರಿ ಮತ ಶಿಕಾರಿ ನಡೆಸುತ್ತಿದ್ದಾರೆ. ತಮಗೆ ಎಡಗೈಗೆ ಪೆಟ್ಟಾಗಿದ್ದರು ಅದನ್ನೆಲ್ಲವನ್ನು ಬದಿಗೊತ್ತಿ ಅಭ್ಯರ್ಥಿ ಪರ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.
ಎಡಗೈ ನೋವಿನಿಂದಾಗಿ ಚಿಕ್ಕ ಸರ್ಜರಿಗೆ ಒಳಗಾಗಿರುವ ಡಿಬಾಸ್ ವಿರಾಮದ ಸಮಯದಲ್ಲಿ ಚುನಾವಣಾ ಪ್ರಚಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇಂದು(ಏ.೨೨) ಮಂಡ್ಯದ ಹಲವು ಗ್ರಾಮಗಳಿಗೆ ಭೇಟಿ ನೀಡಿರುವ ನಟ ದರ್ಶನ್, ಕೈ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಮಂಡ್ಯ ಕಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ನಿಂತಿದ್ದಾರೆ. ತಮ್ಮೆಲ್ಲರ ಅಮೂಲ್ಯ ಮತಗಳನ್ನು ಇವರಿಗೆ ನೀಡಿ, ನಿಮ್ಮ ಸೇವೆ ಮಾಡಲು ಅನುಮತಿ ನೀಡಬೇಕೆಂದು ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮತದಾರ ಪ್ರಭುಗಳ ಬಳಿ ಮತಯಾಚಿಸಿದ್ದಾರೆ ಡಿ ಬಾಸ್.
ಇನ್ನು ಜಿಲ್ಲೆಯಾದ್ಯಂತ ದರ್ಶನ್ ಮತ ಶಿಕಾರಿಗೆ ಮುಂದಾಗಿದ್ದು, ಹೋದ ಕಡೆಯಲ್ಲಾ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಎಲ್ಲರೂ ನಟನನ್ನು ಆತ್ಮೀಯತೆಯಿಂದ ಸ್ವಾಗತಿಸುತ್ತಿದ್ದಾರೆ.
ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಇದೇ ಕ್ಷೇತ್ರದಲ್ಲಿ ಮತಯಾಚಿಸಿದ್ದ ದರ್ಶನ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತ ಕೇಳುತ್ತಿದ್ದಾರೆ.