ಮೈಸೂರು: ದರ್ಶನ್ ಆಪ್ತೆ ಪವಿತ್ರಾಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗಾ ಮೂಲಕ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ ಅರೋಪದ ಮೇಲೆ ನಟ ದರ್ಶನ್ ಅವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಬಳಿಕ ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ದರ್ಶನ್ ಜತೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 10 ಜನರನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಸಂಬಂಧ ಮೈಸೂರಿನಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿದ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ದರ್ಶನ್ ನಟನೆಯ ಡೆವಿಲ್ ಚಿತ್ರದ ಶೂಟಿಂಗ್ ಮೈಸೂರಿನ ಲಲಿತ್ ಮಹಲ್ ಹೋಟೆಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸಂಬಂಧ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈ ಚಿತ್ರಕ್ಕಾಗಿ ಅವರಿಗೆ ರ್ಯಾಡಿಸನ್ ಹೋಟೆಲ್‌ನಲ್ಲಿ ಜೂನ್.9 ರಿಂದ ರೂಂ ಬುಕ್ ಆಗಿತ್ತು. ಅದೇ ಹೋಟೆಲ್‌ನಲ್ಲಿ ತಂಗಿದ್ದರು. ಹೋಟೆಲ್ ಮುಂಭಾಗದಲ್ಲಿಯೇ KA 01 MY 7999 ನಂಬರಿನ ಕಾರು ಸಹಾ ಅಲ್ಲಿಯೇ ಉಳಿದಿತ್ತು.
ಈ ನಡುವೆ ಅವರು ಕವೆಂಪು ನಗರ ಗೋಲ್ಡ್ ಜಿಮ್‌ಗೆ ಹೋಗಿ ವರ್ಕೌಟ್ ಮುಗಿಸಿ ಮತ್ತೆ ಮರಳಿದ್ದಾರೆ. ಮತ್ತೆ ಅಲ್ಲಿಂದ ತಮ್ಮ ಸೇವಕರಿಂದ ಕಲ್ಲಂಗಡಿ ಜ್ಯೂಸ್ ತರಿಸಿಕೊಂಡು ಸೇವಿಸಿದ್ದಾರೆ. ಅದಾದ ಬಳಿಕ ಅಲ್ಲಿಂದ ಹೋಟೆಲ್‌ಗೆ ತೆರಳುವ ಮಾರ್ಗ ಮಧ್ಯೆದಲ್ಲಿ ಪೊಲೀಸರು ದರ್ಶನ್‌ನ್ನು ಬಂಧಿಸಿದ್ದಾರೆ.
ಬಂಧನದ ಬಳಿಕ ದರ್ಶನ್ ತಮ್ಮ ಕಾರಿನಲ್ಲಿ ಬರುವುದಾಗಿ ಹೇಳಿದ್ದರು. ಆದರೆ ಅದನ್ನು ನಿರಾಕರಿಸಿದ ಪೊಲೀಸರು ಆತನನ್ನು ಪೊಲೀಸ್ ವಾಹನದಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.