ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಅವರ ವಿವಾಹ ಸಮಾರಂಭ ನೆರವೇರಲಿದ್ದು, ಪುಷ್ಪ-2 ಚಿತ್ರತಂಡಕ್ಕೆ ವಿವಾಹ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಪುಷ್ಪ-2 ಚಿತ್ರತಂಡದ ನಾಯಕ ಅಲ್ಲು ಅರ್ಜುನ್, ನಾಯಕಿ ರಶ್ಮಿಕಾ ಮಂದಣ್ಣ ಹಾಗೂ ಚಿತ್ರದ ನಿರ್ದೇಶಕ ಸುಕುಮಾರ್ ಅವರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ್ದಾರೆ.
ಪುಷ್ಪ-2 ಚಿತ್ರ ಡಿ.5 ರಂದು ಪ್ರಪಂಚಾದ್ಯಂತ ತೆರೆ ಕಂಡು ಯಶಸ್ವಿ ಕಂಡಿತು. ಇನ್ನು ಈ ಚಿತ್ರದಲ್ಲಿ ಡಾಲಿ ಧನಂಜಯ್ ಅವರು ಜಾಲಿ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.





