ಬೆಂಗಳೂರು: ಇಂದು ಬೆಳಿಗ್ಗೆ ವಿಧಿವಶರಾಗಿದ್ದ ಕನ್ನಡ ಚಿತ್ರರಂಗದ ಸ್ಟಾರ್ ನಟ ಸುದೀಪ್ ತಾಯಿ ಸರೋಜಾ ಅವರ ಅಂತ್ಯಕ್ರಿಯೆಯನ್ನು ವಿಲ್ಸನ್‌ಗಾರ್ಡ್‌ನ ಚಿತಾಗಾರದಲ್ಲಿ ನೆರವೇರಿಸಲಾಯಿತು.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಸರೋಜಾ ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಸುದೀಪ್ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು. ಮಧ್ಯಾಹ್ನದವರೆಗೂ ಸುದೀಪ್ ಅವರ ಮನೆಯಲ್ಲಿ ಅಂತಿ ದರ್ಶನಕ್ಕಾಗಿ ಸರೋಜಾ ಅವರ ಮೃತದೇಹವನ್ನು ಇರಿಸಲಾಗಿತ್ತು.
ಬಳಿಕ ಸಂಜೆಯ ವೇಳೆಗೆ ಪುತ್ರ ಸುದೀಪ್ ಅವರು ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಿದರು.