ಕೇರಳ: ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ ನಡೆದ ಭೂಕುಸಿತದಲ್ಲಿ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಕಾಣೆಯಾಗಿದ್ದಾರೆ.
ಇನ್ನು ನೆರೆ ಸಂತ್ರಸ್ಥರಿಗೆ ನೆರವಾಗಲು ಹಲವಾರು ನಟ ನಟಿಯರು, ವಿವಿಧ ಸೆಲೆಬ್ರೆಟಿಗಳು ಧಾವಿಸಿದ್ದಾರೆ.
ಇತ್ತ ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ಕುಟುಂಬ ಒಂದು ಕೋಟಿ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಇಬ್ಬರು ಸೇರಿ ಒಂದು ಕೋಟಿ ದೇಣಿಗೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಿರಂಜೀವಿ, ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಪ್ರಕೃತಿಯ ಪ್ರಕೋಪದಿಂದಾಗಿ ನೂರಾರು ಅಮೂಲ್ಯ ಜೀವಗಳ ವಿನಾಶ ಮತ್ತು ನಷ್ಟದಿಂದ ತೀವ್ರ ನೊಂದಿದ್ದೇನೆ.
ವಯನಾಡ್ ದುರಂತದ ಸಂತ್ರಸ್ತರಿಗೆ ನನ್ನ ಹೃದಯವಿದೆ. ಸಂತ್ರಸ್ತರಿಗೆ ನಮ್ಮ ಬೆಂಬಲದ ಸಂಕೇತವಾಗಿ ಚರಣ್ ಮತ್ತು ನಾನು ಒಟ್ಟಾಗಿ 1 ಕೋಟಿ ರೂಪಾಯಿಗಳನ್ನು ಕೇರಳ ಸಿಎಂ ಪರಿಹಾರ ನಿಧಿಗೆ ನೀಡುತ್ತಿದ್ದೇವೆ. ನೋವಿನಲ್ಲಿರುವವರೆಲ್ಲ ಚೇತರಿಸಿಕೊಳ್ಳಲಿ ಎಂದು ನನ್ನ ಪ್ರಾರ್ಥನೆ! ಎಂದು ಸುದೀರ್ಘವಾಗಿ ಬರೆದುಕೊಂಡು ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.





