ಕಾಂತಾರ ಚಾಪ್ಟರ್ 1 ಯಶಸ್ಸಿನಲ್ಲಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಯುಗಾದಿ ದಿನವೇ ಅಧ್ಯಾಯ ಎರಡು ಇಲ್ಲಿಂದ ಶುರು ಎಂದು ಬರೆದ ಫೋಟೋ ಹಂಚಿಕೊಂಡಿದ್ದಾರೆ.
ಬಿಳಿ ಬಣ್ಣದ ಬೋರ್ಡ್‌ನಲ್ಲಿ ಓಂ ಎಂದು ಬರೆಯಲಾಗಿದೆ. ಮಧ್ಯಭಾಗದಲ್ಲಿ ಅಧ್ಯಾಯ ಎರಡು ಇಲ್ಲಿಂದ ಶುರು ಎಂದು ಬರೆಯಲಾಗಿದೆ.
ಕಾಂತಾರ ಚಾಪ್ಟರ್-1 ಯಶಸ್ಸಿನ ಬಳಿಕ ಕಾಂತಾರಾ ಚಾಪ್ಟರ್ 2 ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದ ಕುರಿತಾಗಿ ರಿಷಬ್ ಶೆಟ್ಟಿ ಮಾಹಿತಿ ನೀಡಿರಲಿಲ್ಲ.
ಇದೀಗ ಯುಗಾದಿ ಹಬ್ಬದ ದಿನದಂದೇ ಕಾಂತಾರ ಚಾಪ್ಟರ್ 2 ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದು, ಇಲ್ಲಿಂದ ಅಧ್ಯಾಯ ಎರಡು ಶುರು ಎಂದು ತಿಳಿಸಿದ್ದಾರೆ.
ಚಿತ್ರೀಕರಣ ಸೇರಿದಂತೆ ಈಗಾಗಲೇ ಚಿತ್ರಕ್ಕಾಗಿ ಪೂರ್ವ ತಯಾರಿ ನಡೆಸಿರುವ ಅವರು ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ.





