Mysore
25
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಚಂದನ್‍ ಎಂಬ ‘ಫ್ಲರ್ಟ್’: ಚಿತ್ರದಲ್ಲಿ 99 ಗೆಳತಿಯರು

Chandan Kumar Flirt Kannada Movie Nee Nanna Jeeva Kichcha Sudeepa

‘ಪ್ರೇಮ ಬರಹ’ ಚಿತ್ರ ಬಿಡುಗಡೆಯಾಗಿ ಆರು ವರ್ಷಗಳೇ ಆಗಿವೆ. ಈ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸಿದ್ದ ಚಂದನ್‍, ಅದ್ಯಾಕೋ ಆ ನಂತರ ಯಾವೊಂದು ಚಿತ್ರದಲ್ಲೂ ಹೀರೋ ಆಗಿ ನಟಿಸಿರಲಿಲ್ಲ. ಇದೀಗ ಚಂದನ್‍ ಸದ್ದಿಲ್ಲದೆ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅವರು ಬರೀ ನಾಯಕರಷ್ಟೇ ಅಲ್ಲ, ನಿರ್ಮಾಪಕ-ನಿರ್ದೇಶಕರೂ ಹೌದು.

ಸಾಮಾನ್ಯವಾಗಿ ಹುಡುಗಿಯರನ್ನು ಚುಡಾಯಿಸಿಕೊಂಡು ಓಡಾಡುವ ಹುಡುಗರನ್ನು ‘ಫ್ಲರ್ಟ್’ ಎನ್ನುತ್ತಾರೆ. ಇದೀಗ ಇದೇ ಹೆಸರಿನಲ್ಲಿ ಚಂದನ್‍ ಸಿನಿಮಾ ಮಾಡಿರುವುದಷ್ಟೇ ಅಲ್ಲ, ತಾವೇ ‘ಫ್ಲರ್ಟ್’ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸುದೀಪ್‍ ಒಂದು ಹಾಡನ್ನು ಹಾಡಿದ್ದು, ಸೋಮವಾರ ಸಂಜೆ ಈ ಹಾಡು ಬಿಡುಗಡೆಯಾಗಿದೆ.

ಸಾಮಾನ್ಯವಾಗಿ ಪ್ರೇಮಿಗಳ ಮಧ್ಯೆ ಬ್ರೇಕಪ್‍ ಆದರೆ ಒಂದು ಹಾಡು ಇರುತ್ತದೆ. ಇದು ಸ್ನೇಹಿತರ ನಡುವೆ ಬ್ರೇಕಪ್‍ ಆದಾಗ ಬರುವ ಹಾಡು. ಈ ಹಾಡಿಗೆ ಚಂದನ್‍ ಸಾಹಿತ್ಯ ಬರೆದಿದ್ದು, ನಕುಲ್‍ ಅಭಯಂಕರ್‍ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಈ Friendship Anthemಗೆ ಸುದೀಪ್‍ ಧ್ವನಿಯಾಗಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಚಂದನ್‍, ‘ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ನಿಜ ಹೇಳಬೇಕೆಂದರೆ, ಈ ಚಿತ್ರ ಯಾವ ಜಾನರ್‍ಗೆ ಸೇರಬೇಕೆಂದು ನನಗೆ ಗೊತ್ತಿಲ್ಲ. ಏಕೆಂದರೆ, ಈ ಚಿತ್ರದಲ್ಲಿ ಹಲವು ಅಂಶಗಳು ಇವೆ. ನಾನು ಸಿಂಗಲ್‍ ಆಗಿದ್ದಾಗ ಚಿತ್ರದ ಕಥೆ ಬರೆದೆ. ಮದುವೆಯಾದಾಗ ಚಿತ್ರೀಕರಣ ಮಾಡಿದೆ. ಇದೀಗ ಮಗುವೂ ಆಗಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ’ ಎಂದರು.

ಈ ಚಿತ್ರದಲ್ಲಿ ಗಿರೀಶ್‍ ಶಿವಣ್ಣ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕುರಿತು ಮಾತನಾಡಿರುವ ಅವರು, ‘ಅನ್ನನೂ ಹಳಿಸಿತ್ತು, ನಾಯಿನೂ ಹಸಿದಿತ್ತು ಅಂತ ಮಾತಿದೆ, ಅಂಥದ್ದೊಂದು ಪಾತ್ರ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಗಿರಿ ಚೆನ್ನಾಗಿ ನಟಿಸ್ತಾನೆ ಅಂತ ಹೇಳೋಕೆ ಈ ಸಿನಿಮಾ ತೋರಿಸಿದ್ರೆ ಸಾಕು. ಚಂದನ್‍ ನಟನಿಗಿಂಥ ಹೆಚ್ಚಾಗಿ ನಿರ್ದೇಶಕರಾಗಿ ಚಂದನ್‍ ಇಷ್ಟವಾದರು’ ಎಂದು ಹೇಳಿದರು.

ಈ ಚಿತ್ರದಲ್ಲಿ ನಾಯಕಿಯರಾಗಿ ಅಕ್ಷತಾ ಬೋಪಣ್ಣ ಹಾಗೂ ನಿಮಿಕಾ ರತ್ನಾಕರ್‍ ನಟಿಸಿದ್ದಾರೆ. ಜೊತೆಗೆ ಸಾಧು ಕೋಕಿಲ, ಶ್ರುತಿ, ಮೂಗು ಸುರೇಶ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Tags:
error: Content is protected !!