Mysore
21
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌: ಕರ್ನಾಟಕ ಬುಲ್ಡೋಜರ್ಸ್‌ ತಂಡ ಪ್ರಕಟ

ಬೆಂಗಳೂರು: ಫೆಬ್ರವರಿ 8ರಂದು ಆರಂಭವಾಗಲಿರುವ 11ನೇ ವರ್ಷದ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌(CCL) ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ಈ ಬಾರಿಯೂ ತಂಡವನ್ನು ಕಿಚ್ಚ ಸುದೀಪ್‌ ಮುನ್ನಡೆಸಲಿದ್ದು, ಉದ್ಯಮಿ ಆಶೋಕ್‌ ಖೇಣಿ ತಂಡದ ಮಾಲೀಕರಾಗಿದ್ದಾರೆ. ಕಳೆದ ಬಾರಿ ಟೂರ್ನಿಗೆ ತಪ್ಪಿಸಿಕೊಂಡಿದ್ದ ಗಣೇಶ್‌ ಈ ಬಾರಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಫೆ.8ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರೈನ್ಹೋಸ್‌ ಮತ್ತು ಬೆಂಗಾಲ್‌ ಟೈಗರ್ಸ್‌ ಮುಖಾಮುಖಿಯಾಗಲಿದ್ದು, ಅದೇ ದಿನ ನಡೆಯಲಿರುವ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಮತ್ತು ತೆಲುಗು ವಾರಿಯರ್ಸ್‌ ಸೆಣಸಾಡಲಿವೆ.

ಲೀಗ್‌ನಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಲಿವೆ. ಅವುಗಳೆಂದರೆ ಚೆನ್ನೈ ರೈನ್ಹೋಸ್‌, ಬೆಂಗಾಲ್‌ ಟೈಗರ್ಸ್‌, ಪಂಜಾಬ್‌ ಡಿ ಶೇರ್‌, ಮುಂಬೈ ಹೀರೋಸ್‌, ಭೋಜ್‌ಪುರಿ ದಬಾಂಗ್ಸ್‌, ತೆಲುಗು ವಾರಿಯರ್ಸ್‌, ಕರ್ನಾಟಕ ಬುಲ್ಡೋಜರ್ಸ್‌.

ಕರ್ನಾಟಕ ಬುಲ್ಡೋಜರ್ಸ್‌ ತಂಡ: ಸುದೀಪ್‌, ಗಣೇಶ್‌, ಕಾರ್ತಿಕ್‌ ಜಯರಾಮ್‌, ಡಾರ್ಲಿಂಗ್‌ ಕೃಷ್ಣ, ಸುನಿಲ್‌ ರಾವ್‌, ರಾಜೀವ್‌ ಹನು, ಚಂದನ್‌ ಕುಮಾರ್‌, ಪ್ರತಾಪ್‌ ನಾರಾಯಣ್‌, ನಿರೂಪ್‌ ಭಂಡಾರಿ, ಅನೂಒ ಭಂಡಾರಿ, ಕರಣ್‌ ಆರ್ಯನ್‌, ಮಂಜುನಾಥ ಗೌಡ, ಸಾಗರ್‌ ಗೌಡ, ಅಲಕಾನಂದ, ತ್ರಿವಿಕ್ರಮ್‌.

Tags:
error: Content is protected !!