Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ..

ಮುಂಬೈ: ಬಾಲಿವುಡ್‌ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಜೋಡಿಗೆ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶನಿವಾರ(ಸೆ.7) ಮುಂಬೈನ ಗಿರ್ಗಾಂವ್‌ ಪ್ರದೇಶದ ಎಚ್.ಎನ್‌ ರಿಲಯನ್ಸ್‌ ಆಸ್ಪತ್ರೆಗೆ ದೀಪಿಕಾ ಪಡುಕೋಣೆ ದಾಖಲಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್‌ ಆಗಿತ್ತು.

ಈ ವರ್ಷದ ಫೆ.29ರಂದು ತಾವು ತಾಯಿಯಾಗುತ್ತಿರುವ ಖುಷಿಯನ್ನು ರಣವೀರ್‌ ಮತ್ತು ದೀಪಿಕಾ ಜೋಡಿ ಹಂಚಿಕೊಂಡಿದ್ದರು. ಈ ಜೋಡಿ 2018ರಲ್ಲಿ ಇಟಲಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು.

ಇತ್ತೀಚಿಗೆ ಬೇಬಿ ಬಂಪ್‌ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದ್ದ ದೀಪಿಕಾ ಅವರು, ಗರ್ಭಾವಸ್ಥೆಯನ್ನು ಆನಂದಿಸುತ್ತಿರುವುದಾಗಿ ಹಲವು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Tags: