Mysore
14
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಬೇಡ ಕುಲ ರಕ್ಷಣೆಗಿಳಿದ ಪನ್ನಗಾ; ‘ಕಣ್ಣಪ್ಪ’ ಚಿತ್ರದಲ್ಲಿ ಮಧುಬಾಲ …

ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಚಿತ್ರಕ್ಕೆ ಕಳೆದ ವರ್ಷವೇ ಚಿತ್ರೀಕರಣ ಪ್ರಾರಂಭವಾಗಿ, ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ. ಈ ಮಧ್ಯೆ, ಚಿತ್ರತಂಡವು ಚಿತ್ರದಲ್ಲಿ ನಟಿಸಿರುವ ಹಲವು ಕಲಾವಿದರ ಮೊದಲ ನೋಟವನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಇದೀಗ ನಟಿ ‘ರೋಜ’ ಖ್ಯಾತಿಯ ಮಧುಬಾಲ ಅವರ ಮೊದಲ ನೋಟವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಮಧುಬಾಲಾ, ‘ಕಣ್ಣಪ್ಪ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಈ ಹಿಂದೆಯೇ ಗೊತ್ತಿದ್ದ ವಿಚಾರ. ಆದರೆ, ಅವರ ಪಾತ್ರ ಏನು ಮತ್ತು ಅವರು ಹೇಗೆ ಕಾಣುತ್ತಾರೆ ಎಂಬ ಬಗ್ಗೆ ಇದುವರೆಗೂ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಧುಬಾಲ ಅವರ ಪಾತ್ರ ಪರಿಚಯದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ‘ಕಣ್ಣಪ್ಪ’ ಚಿತ್ರದಲ್ಲಿ ಪನ್ನಗ ಹೆಸರಿನ ಪಾತ್ರದಲ್ಲಿ ಮಧುಬಾಲ ನಟಿಸಿದ್ದಾರೆ. ಕೈಯಲ್ಲಿ ಕತ್ತಿಹಿಡಿದು ಶತ್ರುಗಳ ಸಂಹಾರಕ್ಕೆ ನಿಂತಂತಿದೆ ಮಧು ಅವರ ಮೊದಲ ನೋಟ. ಬೇಡ ಕುಲದ ನಾಯಕಿಯಾಗಿ ಮಧು ಅವರ ಪಾತ್ರ ‘ಕಣ್ಣಪ್ಪ’ ಮೂಡಿಬರಲಿದೆ.

ಈಗಾಗಲೇ ‘ಕಣ್ಣಪ್ಪ’ ಚಿತ್ರದ ಟೀಸರ್‌ ಜಾಗತಿಕ ಮಟ್ಟದಲ್ಲಿಯೂ ಕ್ರೇಜ್‌ ಸೃಷ್ಟಿಸಿದೆ. ಇತ್ತೀಚಿನ ಕಾನ್‌ ಚಿತ್ರೋತ್ಸದಲ್ಲಿ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿ, ಜಾಗತಿಕ ಪ್ರೇಕ್ಷಕರ ಗಮನ ಸೆಳೆದಿತ್ತು.

‘ಕಣ್ಣಪ್ಪ’ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ. 14ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. ಇದೆಲ್ಲವನ್ನೂ ಅಧ್ಯಯನ ನಡೆಸಿ ಈ ಸಿನಿಮಾ ಮಾಡಲಾಗಿದೆ ಎಂದು ಟೀಸರ್‌ ಬಿಡುಗಡೆ ಸಂದರ್ಭದಲ್ಲಿ ವಿಷ್ಣು ಮಂಚು ಹೇಳಿಕೊಂಡಿದ್ದರು.

‘ಕಣ್ಣಪ್ಪ’ ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್‌ಕುಮಾರ್, ಮಧುಬಾಲ, ಕಾಜಲ್‌ ಅಗರ್‌ವಾಲ್‌ ಸೇರಿ ಬಹು ತಾರಾಗಣವೇ ಇದೆ. ಈ ಚಿತ್ರವನ್ನು ಮೋಹನ್ ಬಾಬು ನಿರ್ಮಿಸುತ್ತಿದ್ದು, ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್‌ ಆಗಿ ಬಿಡುಗಡೆ ಆಗಲಿದೆ. ಡಿಸೆಂಬರ್‌ನಲ್ಲಿ ಕಣ್ಣಪ್ಪ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಪ್ಲಾನ್‌ ಮಾಡಿದೆ.

Tags:
error: Content is protected !!