ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಯಾರು ವಿನ್ನರ್ ಆಗಲಿದ್ದಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬರೋಬ್ಬರಿ 37 ಕೋಟಿ ವೋಟ್ ಪಡೆದು ಗಿಲ್ಲಿ ನಟ ಅವರು ಗೆದ್ದು ಬೀಗಿದ್ದಾರೆ. ಈ ಮೂಲಕ ಕರ್ನಾಟಕ ಜನರ ಫೇವರಿಟ್ ಎನಿಸಿಕೊಂಡಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಈ ಬಾರಿ ಟಾಪ್ 5 ಸ್ಥಾನದಲ್ಲಿ ಕಾವ್ಯ, ರಘು, ಅಶ್ವಿನಿಗೌಡ, ಗಿಲ್ಲಿ ನಟ ಹಾಗೂ ರಕ್ಷಿತಾ ಇದ್ದರು. ಈ ಟಾಪ್ ಫೈನಲ್ ಲಿಸ್ಟ್‌ಗಳ ಪೈಕಿ ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗಿದ್ದಾರೆ. ಅಂತಿಮವಾಗಿ ಗಿಲಗಲಿ ನಟ ಮತ್ತು ರಕ್ಷಿತಾ ಶೆಟ್ಟಿ ಇಬ್ಬರ ಮಧ್ಯೆ ಪೈಪೋಟಿ ಜೋರಾಗಿತ್ತು. ಕೊನೆಗೂ ಗಿಲ್ಲಿ ನಟ ಬಿಗ್‌ಬಾಸ್ ಗೆದ್ದು ಬೀಗಿದ್ದಾರೆ. ಗಿಲ್ಲಿ ಅವರು ಟ್ರೋಪಿಯೊಂದಿಗೆ 50ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಂಡ್ಯದ ರೈತಾಪಿ ಕುಟುಂಬದಿಂದ ಬಂದ ಗಿಲ್ಲಿ ನಟ ಅವರು ನಿರ್ದೇಶಕರಾಗುವ ಕನಸಿನೊಂದಿಗೆ ಬೆಂಗಳೂರಿಗೆ ಬಂದರು, ಆದರೆ ಹಾಸ್ಯದಿಂದಲೇ ಜನಪ್ರಿಯತೆ ಪಡೆದರು. ಯೂಟ್ಯೂಬ್‌ನಲ್ಲಿ ತಮ್ಮ ಹಾಸ್ಯ ವಿಡಿಯೋಗಳಿಂದ ಮಿಲಿಯನ್‌ಗಟ್ಟಲೆ ವೀಕ್ಷಕರನ್ನು ಪಡೆದರು. ಕಾಮಿಡಿ ಕಿಲಾಡಿಗಳು ಸೀಸನ್ 4, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಬ್ಯಾಚುಲರ್ಸ್, ಮತ್ತು ಕ್ವಾಟ್ಲೆ ಕಿಚನ್ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದೀಗ ಕೊನೆಯದಾಗಿ ಬಿಗ್‌ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.




