Mysore
28
few clouds

Social Media

ಶನಿವಾರ, 15 ಮಾರ್ಚ್ 2025
Light
Dark

ಅಪ್ಪು ಸಿನಿಮಾ ರೀ-ರಿಲೀಸ್‌: ನೆನೆದು ಭಾವುಕರಾದ ರಾಘಣ್ಣ

ಪುನೀತ್‌ ರಾಜಕುಮಾರ್‌ಗೆ 50ನೇ ವರ್ಷದ ಹುಟ್ಟು ಹಬ್ಬ ಹಿನ್ನಲೆ, ಪವರ್‌ಸ್ಟಾರ್‌ ಎಂಬ ಬಿರುದು ನೀಡಿದ ಮೊದಲ ಸಿನಿಮಾ ʼಅಪ್ಪುʼ ರೀ-ರೀಲಿಸ್‌ ಅಗಿದ್ದು, ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬ ಸಮೇತ ಸಿನಿಮಾ ನೋಡಿ ಭಾವುಕರಾಗಿದ್ದಾರೆ.

ʼಅಪ್ಪುʼ ಸಿನಿಮಾ ನೋಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘಣ್ಣ, ಈ ಸಿನಿಮಾ ನೋಡಿ ಪುನೀತ್‌ ಮತ್ತೆ ವಾಪಸ್‌ ಬಂದು ಬಿಡುತ್ತಾನೋ ಅನ್ನಿಸಿತ್ತು ಎಂದು ಕಣ್ಣೀರಾದರು.

ಅಭಿಮಾನಿಗಳ ಹರುಷ ನೋಡಿದರೆ ಒಂದು ಕಡೆ ಖುಷಿ, ಮತ್ತೊಂದು ಕಡೆ ದುಃಖ ಆಗತ್ತದೆ. 23 ವರ್ಷದ ಹಿಂದೆ ಈ ಸಿನಿಮಾ ರಿಲೀಸ್‌ ಆದಾಗ ತಮ್ಮ ಜೊತೆ ಅಪ್ಪಾಜಿ, ಅಮ್ಮ, ಅಪ್ಪು ಜೊತೆಲಿದ್ದ ಆ ದಿನಗಳು ನೆನಪಾಗುತ್ತವೆ. ಇಷ್ಟು ವರ್ಷಗಳಾದರೂ ಅಪ್ಪು ಸಿನಿಮಾದ ಡೈಲಾಗ್‌, ಲಿರಿಕ್ಸ್‌ನನ್ನು ಅಭಿಮಾನಿಗಳು ಮರೆತಿಲ್ಲ. ಎಲ್ಲರೂ ಅಪ್ಪುನ ಸಂಭ್ರಮಿಸಿದರು ಎಂದಿದ್ದಾರೆ.

ಪುನೀತ್‌ ಈಗ ಇಲ್ಲ. ಅಪ್ಪು ಸಿನಿಮಾ ನೋಡಿ ವಾಪಸ್‌ ಬಂದು ಬಿಡ್ತನೇನೋ ಅನ್ನಸ್ತು. ಅಪ್ಪು ದೈಹಿಕವಾಗಿ ಇಲ್ಲದಿದ್ದರೂ, ಸಿನಿಮಾ ಮೂಲಕ ನಮ್ಮ ಜೊತೆಯಲ್ಲಿ ಇರುತ್ತಾರೆ. ಹೀಗೆ ಅವರ ಸಿನಿಮಾ ರಿ-ರಿಲೀಸ್‌ ಮಾಡಿ ನೋಡ್ತಾ ಇರೋಣ ಎಂದು ಹೇಳಿದರು.

ʼಅಪ್ಪುʼ ಸಿನಿಮಾದಲ್ಲಿ ಪುನೀತ್‌ಗೆ ರಕ್ಷಿತಾ ನಾಯಕಿಯಾಗಿ ನಟಿಸಿದ್ದು, ಪುರಿ ಜಗನ್ನಾಥ್‌ ನಿರ್ದೇಶನ ಮಾಡಿದ್ದರು.

Tags: