Mysore
27
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಪುಷ್ಪ-2 ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್ಸ್‌ ಕೊಟ್ಟ ಐಕಾನ್‌ ಸ್ಟಾರ್‌!

ಟಾಲಿವುಡ್‌ನ ಬಹು ನಿರೀಕ್ಷಿತಾ ಪುಷ್ಪ-2 ಚಿತ್ರದ ಬಗ್ಗೆ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರು ಬಿಗ್‌ ಅಪ್‌ಡೇಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಬೇರೆಯದೇ ರೀತಿಯಲ್ಲಿ ಇರಲಿದೆ ಎಂದು ಅಲ್ಲು ಹೇಳಿದ್ದಾರೆ.

ಮಾರುತಿ ನಗರ ಸುಬ್ರಮಣ್ಯಂ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ ನಲ್ಲಿ ಮಾತನಾಡಿರುವ ಅಲ್ಲು ಅರ್ಜುನ್‌, ನಿಮ್ಮೆಲ್ಲರಿಗೂ ಇಷ್ಟ ಆಗುವ ಹಾಗೆ ಬೇರೆ ರೀತಿಯಲ್ಲಿಯೇ ಚಿತ್ರ ಬರುತ್ತಿದೆ. ಈಗ ಏನನ್ನು ಹೇಳುವ ಮಾತಿಲ್ಲ, ಡಿಸೆಂಬರ್‌ 6ಕ್ಕೆ ತಗ್ಗೋ ಮಾತೆ ಇಲ್ಲ ಎಂದು ಅಲ್ಲು ಹೇಳಿದ್ದಾರೆ.

ಇನ್ನು ಅಲ್ಲು ಅರ್ಜುನ್‌ ಅವರು ಚಿತ್ರ ರಿಲೀಸ್‌ ಆಗಲಿರುವ ದಿನಾಂಕದ ಜೊತೆಗೆ ತಾವು ಬರುವುದಾಗಿ ಹೇಳಿದನ್ನು ಕಂಡ ಸುಕುಮಾರ್‌ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು. ಆ ಮೂಲಕ ತಮ್ಮ ಚಿತ್ರದ ಅಧಿಕೃತ ಆಗಮನದ ಬಗ್ಗೆ ನಟ ಮತ್ತೊಮ್ಮೆ ಮಾತನಾಡಿ ತಮ್ಮ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.

ದೊಡ್ಡ ತಾರಾಂಗಣವನ್ನೇ ಹೊಂದಿರುವ ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್‌ ನಾಯಕರಾದರೆ, ಇವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ಮಲಯಾಳಂನ ಖ್ಯಾತ ನಟ ಫಹಾದ್‌ ಫಾಸಿಲ್‌ ನಟಿಸಿದ್ದು, ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್‌ ಸಂಗೀತಾ ಸಂಯೋಜಿಸಿದ್ದು, ಈ ಚಿತ್ರವನ್ನು ಸುಕುಮಾರ್‌ ನಿರ್ದೇಶಿಸಿದ್ದಾರೆ.

Tags:
error: Content is protected !!