Mysore
27
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅದ್ದೂರಿಯಾಗಿ ನಡೆದ ಸೋನಾಕ್ಷಿ-ಇಕ್ಬಾಲ್‌ ಅಂತರ್‌ಧರ್ಮೀಯ ಮದುವೆ!

ಬಿ ಟೌನ್‌ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ಭಾನುವಾರ (ಜೂನ್‌.23) ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರ ಬಹು ಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ ಅವರೊಂದಿಗೆ ವಿವಾಹವಾಗುವ ಮೂಲಕ ಬಿಟೌನ್‌ ಅಂಗಳದಲ್ಲಿ ಮತ್ತೊಂದು ಅಂತರ್‌ಧರ್ಮೀಯ ಮದುವೆಗೆ ಸಾಕ್ಷಿಯಾದರು.

ಮುಂಬೈನಲ್ಲಿ ತಮ್ಮ ಕುಟುಂಬ, ಆಪ್ತರ ಸಮ್ಮುಖದಲ್ಲಿ ಈ ನವಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯಿತು. ಈ ಮದವೆಯ ವಿಶೇಷತೆಯೆಂದರೆ ಇಂದೊಂದು ಅಂತರ್‌ಧರ್ಮೀಯ ಮದುವೆಯಾಗಿದ್ದು, ಪರಸ್ಪರ ಎರಡು ಕುಟುಂಬಗಳು ಒಪ್ಪಿ ಈ ಮದುವೆ ನಡೆಸಿಕೊಟ್ಟಿವೆ.

ಸೋನಾಕ್ಷಿ ಸಿನ್ಹಾ ಅವರು ಕಳೆದ 7 ವರ್ಷಗಳಿಂದ ಇಕ್ಬಾಲ್‌ ಅವರನ್ನು ಪ್ರೀತಿಸುತ್ತಿದ್ದು ಈ ವಿಚಾರವನ್ನು ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದಾರೆ. 7 ವರ್ಷಗಳ ಹಿಂದೆ ತಾವು ಪ್ರೀತಿ ಆರಂಭಿಸಿದ ದಿನವಾದ ಜೂನ್‌. 23 ದಿನಾಂಕದಂದೆ ಈ ಪ್ರೇಮಿಗಳ ಮದುವೆಯೂ ನಡೆದಿದೆ.

ಇನ್ನು ಈ ಪ್ರೀತಿ ಮದುವೆಯವರೆಗೆ ನಡೆದ ಹಾದಿಯ ಬಗ್ಗೆ ನಟಿ ಸೊನಾಕ್ಷಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪೋಟೋ ಒಂದನ್ನು ಹಂಚಿಕೊಂಡು ಪೋಸ್ಟ್‌ ಮಾಡಿರುವ ಅವರು, “ಇದೇ ದಿನ, ಏಳು ವರ್ಷಗಳ ಹಿಂದೆ (23.06.2017) ಪರಸ್ಪರರ ಕಣ್ಣುಗಳಲ್ಲಿ, ನಾವು ಪ್ರೀತಿಯನ್ನು ಅದರ ಶುದ್ಧ ರೂಪದಲ್ಲಿ ನೋಡಿದ್ದೇವೆ ಮತ್ತು ಅದನ್ನು ಹಿಡಿದಿಡಲು ನಿರ್ಧರಿಸಿದ್ದೇವೆ. ಇಂದು ಆ ಪ್ರೀತಿಯು ಎಲ್ಲಾ ಸವಾಲುಗಳು ಮತ್ತು ವಿಜಯಗಳ ಮೂಲಕ ನಮಗೆ ಮಾರ್ಗದರ್ಶನ ನೀಡಿದೆ … ಈ ಕ್ಷಣದವರೆಗೆ ಮುನ್ನಡೆಸಿದೆ … ಅಲ್ಲಿ ನಮ್ಮ ಎರಡೂ ಕುಟುಂಬಗಳು ಮತ್ತು ನಮ್ಮ ಎರಡೂ ದೇವರುಗಳ ಆಶೀರ್ವಾದದೊಂದಿಗೆ … ನಾವು ಈಗ ಪುರುಷ ಮತ್ತು ಹೆಂಡತಿಯಾಗಿದ್ದೇವೆ.

ಇಲ್ಲಿ ಪ್ರೀತಿ, ಭರವಸೆ ಮತ್ತು ಪರಸ್ಪರ ಸುಂದರವಾಗಿರುವ ಎಲ್ಲಾ ವಿಷಯಗಳು, ಇಂದಿನಿಂದ ಶಾಶ್ವತವಾಗಿ ಇರಲಿದೆ ಎಂದು ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tags: