ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಕುರಿತು ನಟಿ ರಮ್ಯಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣ ಕೋರ್ಟ್‌ನಲ್ಲಿದೆ. ಈಗ ಇದರ ಬಗ್ಗೆ ಏನೂ ಮಾತನಾಡಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೆಲ ದಾಖಲೆಗಳನ್ನು ಕೇಳಿತ್ತು. ಅದಕ್ಕೆ ನಾನೇ ನೇರವಾಗಿ ಬಂದು ಕೊಟ್ಟಿದ್ದೇನೆ. ಈ ಪ್ರಕರಣ ಕೋರ್ಟ್‌ನಲ್ಲಿರುವ ಕಾರಣಕ್ಕೆ ಹೆಚ್ಚೇನು ಮಾತನಾಡಲ್ಲ ಎಂದರು.
ಇನ್ನು ಮತ್ತೆ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಳ್ಳೆಯ ಕಥೆ ಸಿಕ್ಕರೆ ಆದಷ್ಟು ಬೇಗ ಬರುತ್ತೇನೆ ಎಂದರು.
ಇನ್ನು ಮಾಹಿತಿಯ ಪ್ರಕಾರ ಜನವರಿ.15ಕ್ಕೆ ಒರಿಜಿನಲ್ ಅಗ್ರಿಮೆಂಟ್ ಕಾಪಿ ಜೊತೆಗೆ ಕೋರ್ಟ್‌ಗೆ ಬರಲು ರಮ್ಯಾಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





