Mysore
21
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಕೊಡವ ಶೈಲಿಯಲ್ಲಿ ಫೋಟೋ ಶೂಟ್‌ ಮಾಡಿಸಿ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ!

ಕೊಡಗು: ನಟಿ ಹರ್ಷಿಕಾ ಪೂನಚ್ಚ ಹಾಗೂ ಭುವನ್‌ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಯಲ್ಲಿ ತಮ್ಮ ಸಾಂಪ್ರದಾಯಿಕ ಕೊಡವ ಶೈಲಿಯಲ್ಲಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಆ ಮೂಲಕ ಅಭಿಮಾನಿಗಳಿಗೆ ತಮ್ಮ ಮೊದಲ ಮಗುವಿನ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಗಸ್ಟ್‌ 24, 2023ರಂದು ಭುವನ್‌ ಹಾಗು ಹರ್ಷಿಕಾ ಮದುವೆಯಾಗಿತ್ತು. ಮದುವೆಯಾದ ಬಳಿಕ ಹರ್ಷಿಕಾ ಯಾವುದೇ ಚಲನಚಿತ್ರಗಳಲ್ಲಿ ನಟಿಸಿಲ್ಲ. ಮನೆಯಲ್ಲಿಯೇ ಇದ್ದುಕೊಂಡು ಕೊಡವ ಆಹಾರ ಪದ್ಧತಿ ಹಾಗೂ ಉಡುಗೆ ಬಗೆಗಿನ ಮಾಹಿತಿಗಳನ್ನು ಯುಟೂಬ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳ ಜತೆಯಲ್ಲಿದ್ದರು.

ಇದೀಗ ಮೊದಲ ಮಗುವಿನ ಆಗಮನವಾಗಲಿದ್ದು, ಈ ಸಂತಸ ವಿಷಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಳೊಂದಿಗೆ ಹಂಚಿಕೊಂಡಿದ್ದಾರೆ ಹರ್ಷಿಕಾ.

ಈ ಸಂಬಂಧ ಕೊಡವ ಶೈಲಿಯಲ್ಲಿ ಫೋಟೋ ಶೂಟ್‌ ಮಾಡಿಸಿರು ಫೋಟೋ ಹಂಚಿಕೊಂಡು ತಮ್ಮ ಎಕ್ಸ್‌ ಖಾತೆಯಲ್ಲಿ ” ಗೆಳೆಯರೆ ,ಇಂದಿನವರೆಗು ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲು ಇರಲಿ. ಅಕ್ಟೋಬರ್ ಗೆ ಕಾತುರದಿಂದ ಕಾಯುತ್ತಿದ್ದೇವೆ. ಇಂತಿ ನಿಮ್ಮ ಭುವನ್, ಹರ್ಷಿಕಾ” ಎಂದು ಬರೆದುಕೊಂಡು ತಾವು ತಾಯಿಯಾಗುತ್ತಿರುವ ವಿಷಯವನ್ನು ತಿಳಿಸಿದ್ದಾರೆ.

Tags:
error: Content is protected !!