ಬೆಂಗಳೂರು: ನಾವು ಕಲಾವಿದರು, ನಮಗೆ ಎಲ್ಲಾ ಭಾಷೆ ಮುಖ್ಯ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಕನ್ನಡದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಮಲ್ ಹಾಸನ್ ಕ್ಷಮೆ ಕೇಳುವ ಬಗ್ಗೆ ನಾನು ಹೇಳುವುದಿಲ್ಲ. ನಾನು ನಟ ಕಮಲ್ ಹಾಸನ್ ಅವರ ದೊಡ್ಡ ಅಭಿಮಾನಿ. ಅವರು ಬೆಂಗಳೂರಿಗೆ ಬಂದಾಗ ಕೇಳಬೇಕಿತ್ತು ಎಂದರು.
ನಾನು ಯಾರು ಎಂದು ನಮ್ಮ ತಂದೆಗೆ ಗೊತ್ತು. ನಾನು ಯಾರು ಎಂದು ಕರ್ನಾಟಕದ ಜನತೆಗೂ ಗೊತ್ತು. ನಾನು ಕರ್ನಾಟಕಕ್ಕೆ ಏನು ಮಾಡಿದ್ದೇನೆ ಎಂದು ಜನಕ್ಕೆ ಗೊತ್ತು ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿಲ್ಲ. ಭಾಷೆ ಮಾತನಾಡುತ್ತಿದ್ದಾರೆ ಅಂದಾಗ ನಾನು ಕೈತಟ್ಟಿದ್ದು ನಿಜ. ಆ ಸಮಯದಲ್ಲಿ ಏನು ಮಾತನಾಡುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ ಎಂದು ಹೇಳಿದರು.





