ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಮೋಹಕ ತಾರೆ ರಮ್ಯಾ ಅವರು ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಹಲವಾರು ಬಾರಿ ರಮ್ಯಾ ಮದುವೆ ವಿಚಾರ ಹಾಟ್ ಟಾಪಿಕ್ ಕೂಡ ಆಗಿತ್ತು. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಯಾವುದೇ ಕಾರ್ಯಕ್ರಮಕ್ಕೆ ಹೋದಲ್ಲಿ ಅಲ್ಲಿ ಮದುವೆ ವಿಷಯ ಪ್ರಸ್ತಾಪ ಆಗುತ್ತಿತ್ತು.
ಈ ವೀಕೆಂಡ್‌ನಲ್ಲೂ ರಮ್ಯಾ ಮದುವೆ ವಿಷಯ ಬ್ರೇಕಿಂಗ್ ಆಗಿತ್ತು. ರಮ್ಯಾ ಈ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ದಯವಿಟ್ಟು ವದಂತಿ ಮತ್ತು ಸುಳ್ಳು ಸುದ್ದಿಗಳನ್ನು ಹಾಕಬೇಡಿ. ಮುಂದೆ ನಾನು ಮದುವೆ ಆಗುವಾಗ ನಿಮಗೆ ಹೇಳುತ್ತೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.