ಬೆಂಗಳೂರು: ಇಂದು ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಜನ್ಮದಿನ ಹಿನ್ನಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು.
ರಾಘವೇಂದ್ರ ರಾಜ್ ಕುಮಾರ್ ದಂಪತಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ಪುತ್ರಿಯರಾದ ಧೃತಿ ಹಾಗೂ ವಂದಿತಾ, ಯುವ ರಾಜ್ ಕುಮಾರ್ ಮತ್ತಿರರು ಭಾಗಿಯಾಗಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದು, ಪುನೀತ್‌ಗೆ ಪುಷ್ಪನಮನ ಸಲ್ಲಿಸಿ ನೆಚ್ಚಿನ ನಟನ ಗುಣಗಾನ ಮಾಡುತ್ತಿದ್ದಾರೆ.





