Mysore
25
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಪಕ್ಷ ನೋಡದೇ ವ್ಯಕ್ತಿ ನೋಡಿ ಮತ ಚಲಾಯಿಸಿ: ನಟ ಪ್ರಕಾಶ್‌ ರಾಜ್‌

ಮಂಗಳೂರು: ಅಭ್ಯರ್ಥಿ ಯಾವ ಪಕ್ಷ ಪ್ರತಿನಿಧಿಸುತ್ತಾನೆ ಎಂಬುದನ್ನು ನೋಡಬೇಡಿ ಅಭ್ಯರ್ಥಿಯನ್ನು ನೋಡಿ ಮತ ಚಲಾಯಿಸಿ ಎಂದು ನಟ ಪ್ರಕಾಶ್‌ ರಾಜ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್‌ ರಾಜ್‌, ಪ್ರಜಾಪ್ರಭುತ್ವದ ಸೊಬಗೇ ಅದು, ನಮಗೆ ಸೂಕ್ತ ಎನಿಸುವ ಅಭ್ಯರ್ಥಿಯನ್ನು ಆಯ್ಕೆಮಾಡಿಕೊಳ್ಳಬೇಕು. ವ್ಯಕ್ತಿ ಸ್ಪರ್ಧಿಸುವ ಪಕ್ಷಕ್ಕಿಂತ ವ್ಯಕ್ತಿತ್ವ ಮುಖ್ಯವಾಗಿರುತ್ತದೆ ಎಂದರು.

ಅಭ್ಯರ್ಥಿ ಯಾವ ಪಕ್ಷ ಪ್ರತಿನಿಧಿಸುತ್ತಾನೆ ಅನ್ನೋದು ಬೇರೆ ವಿಷಯ. ಆದರೆ ಅವನು ನಮ್ಮ ನಿಯೋಜಕ ವರ್ಗವನ್ನು ಪ್ರತಿನಿಧಿಸುತ್ತಾನೆಯೇ? ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾನೆಯೇ? ನಮಗೆ ಅವಶ್ಯವಿರುವ ಸಮಯದಲ್ಲಿ ಕೈಗೆ ಸಿಗುತ್ತಾನೆಯೇ? ಎಂಬುದನ್ನು ಗಮನಿಸಿ ಮತ ಚಲಾಯಿಸಬೇಕು. ನಾವು ಆರಿಸಿ ಕಳಿಸುವ ವ್ಯಕ್ತಿ ನಮ್ಮವನಾಗಿರಬೇಕು ಮತ್ತು ಸದಾ ನಮ್ಮ ಜೊತೆ ಇರಬೇಕು ಎಂದು ಪ್ರಕಾಶ್ ರಾಜ್ ಸಲಹೆ ನೀಡಿದರು.

ರಾಜಕೀಯ ಪಕ್ಷಗಳಿಗೆ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ, ನನಗೆ ಯಾವುದೇ ಪಕ್ಷ ಸೇರುವ ಇಚ್ಛೆಯಿಲ್ಲ, ಸಮಾಜ ಮತ್ತು ಮಾಧ್ಯಮ ತನ್ನನ್ನು ಗೌರವಿಸುತ್ತವೆ ನನಗೆ ಅಷ್ಟು ಸಾಕು ಎಂದು ಪ್ರಕಾಶ್ ರಾಜ್ ತಿಳಿಸಿದರು.

Tags:
error: Content is protected !!