Mysore
20
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮೊಗ ಅವಿನಾಶ್‌ ದಿವಾಕರ್‌

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಾಸ್ಯನಟ ನರಸಿಂಹರಾಜು ಅವರ ಮೊಮ್ಮೊಗ ದಿವಾಕರ್‌ ಈಗ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ.

ನರಸಿಂಹರಾಜು ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಈಗ ಅವರ ಮೊಮ್ಮೊಗ ಅವಿನಾಶ್‌ ದಿವಾಕರ್‌ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅವರು, ಈಗ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ ಧಾರಾವಾಹಿಯಲ್ಲಿ ಹೀರೋ ಪಾತ್ರ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.

ಕಿರುತೆರೆಗೆ ಎಂಟ್ರಿ ಕೊಡುವುದಕ್ಕೆ ಕಾರಣ ನೀಡಿದ ಅವರು, ನಾವು ಕಂಡ ಕನಸ್ಸು ಇಲ್ಲಿಂದಾನೇ ಯಶಸ್ಸು ಕಾಣಬಹುದು. ಹೀರೋಗಳು ಮಾಡದ ದುಡ್ಡನ್ನು ಈಗ ಇನ್‌ಫ್ಲ್ಯೂಯೆನ್ಸ್‌ಗಳು ಮಾಡುತ್ತಿದ್ದಾರೆ. ಅದೇ ರೀತಿ ಕಿರುತೆರೆಗೂ ಭಾರೀ ಬೇಡಿಕೆಯಿದೆ. ಈ ಧಾರಾವಾಹಿಯಲ್ಲಿ ಈ ಪಾತ್ರವನ್ನು ನೀವೇ ಮಾಡಬೇಕು ಎಂಬ ಬೇಡಿಕೆ ಬಂತು. ಹಾಗಾಗಿ ಕಿರುತೆಗೆ ಬರಲು ಒಪ್ಪಿಕೊಂಡೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದ್ದ ಹಾಸ್ಯನಟ ನರಸಿಂಹರಾಜು ಅವರು, ಚಿತ್ರರಂಗದ ಯಶಸ್ಸಿಗೆ ಹಗಲಿರುಳು ದುಡಿದಿದ್ದಾರೆ. ಈಗ ಅವರ ಮೊಮ್ಮಗ ಕಿರುತೆರೆಗೆ ಕಾಲಿಟ್ಟಿದ್ದು, ದೊಡ್ಡ ದೊಡ್ಡ ಹೀರೋಗಳ ಲಿಸ್ಟ್‌ನಲ್ಲಿ ಸೇರಲಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

 

Tags:
error: Content is protected !!