ಬೆಂಗಳೂರು: ಕನ್ನಡ ಚಿತ್ರರಂಗದ ನಟ ಕಿರಣ್ ರಾಜ್‌ಗೆ ಕಾರು ಅಪಘಾತವಾದ ಬೆನ್ನಲ್ಲೇ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಕಾರು ಅಪಘಾತದ ಬಗ್ಗೆ ನಟ ಕಿರಣ್ ರಾಜ್ ರಿಯಾಕ್ಟ್ ಮಾಡಿದ್ದು, ನಾನು ಈಗ ಆರೋಗ್ಯವಾಗಿದ್ದೇನೆ. ಯಾರೂ ಕೂಡ ನನ್ನ ಬಗ್ಗೆ ಚಿಂತೆ ಮಾಡಬೇಡಿ ಎಂದಿದ್ದಾರೆ.
ಏನಾಗಿದೆ ಅನ್ನೋದು ನಿಮೆಗಲ್ಲಾ ಮಾಹಿತಿ ಸಿಕ್ಕಿರುತ್ತದೆ. ಯಾರೆಲ್ಲಾ ಪ್ಯಾನಿಕ್ ಆಗಿ ಮೆಸೇಜ್ ಮಾಡುತ್ತಿರೋ ಚಿಂತಿಸಬೇಡಿ.
ನಾನು ಈಗ ಆರೋಗ್ಯವಾಗಿದ್ದೇನೆ. ನನಗೆ ಸ್ವಲ್ಪ ಏಟಾಗಿತ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ದಯವಿಟ್ಟು ಯಾರೂ ಕೂಡ ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳುವ ಮೂಲಕ ಹೆಲ್ತ್ ಅಪ್‌ಡೇಟ್ ನೀಡಿದ್ದಾರೆ.
ಅಂದಹಾಗೆ ಮುದ್ದರಾಯನ ಪಾಳ್ಯ ವೃದ್ಧಾಶ್ರಮಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಎಕ್ಸಿಕ್ಯೂಟರ್ ಪ್ರೊಡ್ಯೂಸರ್ ಗಿರೀಶ್ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿತ್ತು.
ಅಪಘಾತದ ರಭಸಕ್ಕೆ ಕಿರಣ್ ರಾಜ್ ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.





