Mysore
19
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ದರ್ಶನ್ ಗೆ ಸಿಗದ ಮನೆಯೂಟ: ಜುಲೈ 29ಕ್ಕೆ ರಿಟ್‌ ಅರ್ಜಿ ವಿಚಾರಣೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್‌ ಅವರು ಮನೆಯೂಟ, ಹಾಸಿಗೆ ಕೇಳಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆಯನ್ನು ಇದೇ ಜು.29ಕ್ಕೆ ಮುಂದೂಡಿ ಕೋರ್ಟ್‌ ಆದೇಶಿಸಿದೆ.

ಮನೆಯಿಂದ ಹಾಸಿಗೆ, ಊಟ, ಪುಸ್ತಕ ಸೇರಿದಂತೆ ಇತರೆ ಅಗತ್ಯ ವಸ್ತುಗಳು ಬೇಕೆಂದು ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಎಸ್‌.ಆರ್‌ ಕೃಷ್ಣಕುಮಾರ್‌ ಅವರಿದ್ದ ಪೀಠ, ಈ ಪ್ರಕರಣದಲ್ಲಿ ಮಧ್ಯಂತರ ತೀರ್ಪು ನೀಡಲು ನ್ಯಾಯಾಲಯ ಬಯಸುವುದಿಲ್ಲ. ಈ ಸಂಬಂಧ ಮ್ಯಾಜಿಸ್ಟ್ರೇಜ್‌ ಕೋರ್ಟ್‌ ಮುಂದೆ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಹೇಳಿದೆ. ಹಾಗೂ ರಿಟ್‌ ಅರ್ಜಿ ಕುರಿತಂತೆ ಜು.29ಕ್ಕೆ ವಿಚಾರಣೆ ಮಾಡುವುದಾಗಿ ಹೇಳಿದೆ.

ಜತೆಗೆ ಈ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಜು.26 ಒಳಗಾಗಿ ವಿಚಾರಣೆ ಆಗಬೇಕು ಹಾಗೂ ತೀರ್ಪು ಪ್ರಕಟಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.

Tags:
error: Content is protected !!