Mysore
27
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಜೈಲಿನಲ್ಲಿ ಯೋಗದ ಮೊರೆ ಹೋದ ನಟ ದರ್ಶನ್‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿ ಜೈಲು ಸೇರಿರುವ ದರ್ಶನ್‌ ತೂಗುದೀಪ್‌ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುಗ್ಗಿದ್ದು, ಇದಕ್ಕಾಗಿ ದರ್ಶನ್‌ ಜೈಲಿನಲ್ಲಿ ಯೋಗಾಭ್ಯಾಸದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿರುವ ನಟ ದರ್ಶನ್‌, ಜೈಲಿನ ವಾತಾವರಣದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೊರಗೆ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ಗೆ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಜೈಲುವಾಸ, ದರ್ಶನ್‌ ಅವರನ್ನು ದೈಹಿಕ ಹಾಗೂ ತುಸು ಮಾನಸಿಕವಾಗಿಯೂ ಕುಗ್ಗಿಸಿದೆ. ಮಾನಸಿಕವಾಗಿ ಕುಗ್ಗಿರುವ ದರ್ಶನ್‌ ಈಗ ಯೋಗದ ಮೊರೆ ಹೋಗಿದ್ದಾರೆ.

ಪ್ರತಿದಿನ ಎರಡು ಬಾರಿ ದರ್ಶನ್‌ ಜೈಲಿನಲ್ಲಿಯೇ ಯೋಗಾಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು, ದರ್ಶನ್‌ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದ ಜೈಲಾಧಿಕಾರಿಗಳಿಗೂ ಇದು ನಿರಾಳತೆ ಮೂಡಿಸಿದೆ.

ದರ್ಶನ್‌ ಜೈಲಿನಲ್ಲಿ ಬಹುತೇಕ ಒಂಟಿಯಾಗಿಯೇ ಸಮಯ ದೂಡುತ್ತಿದ್ದಾರೆ ಎನ್ನಲಾಗುತ್ತಿದೆ. ಸಹಖೈದಿಗಳ ಸಹವಾಸದಿಂದಲೂ ದೂರವೇ ಇದ್ದಾರೆ. ಒಂಟಿತನ ಕಳೆಯಲು ಕೆಲ ಪುಸ್ತಕಗಳನ್ನು ಜೈಲಿನ ಗ್ರಂಥಾಲಯದಿಂದ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!