Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಚೆಲುವಣ್ಣನ ಸಹಾಯ 7 ಜನ್ಮವಾದರು ತೀರಿಸಲು ಆಗುವುದಿಲ್ಲ: ನಟ ದರ್ಶನ್‌

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಈ ಬಾರಿ ಜೆಡಿಎಸ್‌ ನೇರ ಸ್ಪರ್ಧೇ ಮಾಡದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ಇತ್ತ ಕಾಂಗ್ರೆಸ್‌, ಬಿಜೆಪಿ-ಜೆಡಿಎಸ್‌ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಹೂಡಿದ್ದು, ಬಲಿಷ್ಠ ಅಭ್ಯರ್ಥಿಯನ್ನೇ ನೇಮಿಸಿದೆ.

ಇತ್ತ ಬಿಜೆಪಿಯಿಂದ ಟಿಕೆಟ್‌ ಸಿಗುವ ಭರವಸೆ ಹೊಂದಿದ್ದ ಸಂಸದೆ ಸುಮಲತಾ ಅಂಬರೀಶ್‌ಗೆ ಬಿಜೆಪಿ ಶಾಕ್‌ ನೀಡಿತ್ತು. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತು.

ಇದರ ಬೆನ್ನಲ್ಲೇ ಸುಮಲತಾ ಪಕ್ಷ ಹೇಳಿದರೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. ಇವರ ಮಾತಿಗೆ ಧನಿ ಗೂಡಿಸಿದ್ದ ದಾಸ, ಅಮ್ಮ ಬಾವಿಗೆ ಬೀಳು ಎಂದರೂ ಬೀಳಲು ಸಿದ್ದನಾಗಿರುವೆ ಎಂದು ಹೇಳಿಕೆ ನೀಡಿದ್ದರು.

ಈ ಎಲ್ಲಾ ಪ್ರಕರಣಗಳಿಂದ ಈ ಬಾರಿ ಮಂಡ್ಯದಲ್ಲಿ ದರ್ಶನ್‌, ಎಚ್‌ಡಿಕೆ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಡಿಬಾಸ್‌ ಏಕಾಏಕಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಮತ ಶಿಕಾರಿಗೆ ಸಜ್ಜಾಗಿಬಿಟ್ಟಿದ್ದರು.

ಇದು ಎಚ್‌ಡಿಕೆ ಹಾಗೂ ಮೈತ್ರಿ ಪಕ್ಷದ ದ್ವಂದ್ವಕ್ಕೆ ಕಾರಣವಾಗಿತ್ತು. ಇದಕ್ಕೆ ಸುಮಲತಾ ಹಾಗೂ ಡಿ ಬಾಸ್‌ ಇಬ್ಬರು ಸ್ಪಷ್ಟನೆ ಕೂಡಾ ನೀಡದ್ದಾರೆ. ಸುಮಲತಾ ಪ್ರಚಾರದ ಬಗ್ಗೆ ಮಾತನಾಡಿ, ಅದು ಅವರ ವಯಕ್ತಿಕ ಎಲ್ಲದಕ್ಕೂ ನಮ್ಮನ್ನೇ ಕೇಳಿ ಎನ್ನವುದು ಸರಿಯಲ್ಲ ಎಂದರೆ, ಡಿಬಾಸ್‌ ನಾನು ಪಕ್ಷದ ಪರವಾಗಿ ಬಂದಿಲ್ಲ ವ್ಯಕ್ತಿಗಾಗಿ ಬಂದಿದ್ದೇನೆ ಎಂದಿದ್ದರು.

ಇವತ್ತು (ಏ.23, ಮಂಗಳವಾರ) ಒಂದು ಹೆಜ್ಜೆ ಮುಂದೆ ಹೋಗಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರನ್ನು ಕೊಂಡಾಡಿದ್ದಾರೆ. ಇದು ಎಲ್ಲರಲ್ಲಿಯೂ ಅಚ್ಚರಿಗೆ ಕಾರಣವಾಗಿದೆ.

ಜಿಲ್ಲೆಯ ನಾಗಮಂಗಲ ಕ್ಷೇತ್ರದ ಬೆಳ್ಳೂರು ಗ್ರಾಮದಲ್ಲಿ ಮತ ಯಾಚಿಸಿ ರೋಡ್‌ ಶೋ ನಡೆಸುವ ಸಂದರ್ಭದಲ್ಲಿ ಮಾತನಾಡಿರುವ ನಟ ದರ್ಶನ್‌, ಮಂಡ್ಯದಲ್ಲಿ ಚೆಲುವರಾಯಸ್ವಾಮಿ ಅವರ ಕೈ ಬಲಪಡಿಸಲು ಸ್ಟಾರ್‌ ಚಂದ್ರು ಬೆಂಬಲಿಸುವಂತೆ ಮನವಿ ಮಾಡಿದರು.

ನಾನು ಇವತ್ತು ಕಾಂಗ್ರೆಸ್‌ ಪರ ಮತ ಯಾಚಿಸಲು ಒಂದು ನಿರ್ಧಿಷ್ಟ ಕಾರಣವಿದೆ. 2019ರ ಚುನಾವಣೆ ವೇಳೆ ಚೆಲುವಣ್ಣ ನಮಗೆ ಸಹಾಯ ಮಾಡಿದರು. ಈ ಸಹಾಯವನ್ನು ನಾನು 7 ಜನ್ಮ ಎತ್ತಿದರು ತೀರಿಸಲು ಆಗವುದಿಲ್ಲ. ಹಾಗಾಗಿ ನಾನು ಕಾಂಗ್ರೆಸ್‌ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅಸಲಿ ಕಾರಣವನ್ನು ವಿವರಿಸಿದರು.

2019 ರಲ್ಲಿ ಮೊದಲ ಬಾರಿಗೆ ಸಂಸದೆ ಸುಮಲತಾ ಅಂಬರೀಶ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ರು. ಈ ವೇಳೆ ನಟ ದರ್ಶನ್‌ ಹಾಗೂ ಯಶ್‌ ಜಿಲ್ಲೆಯಾದ್ಯಂತ ಪ್ರಚಾರ ಮಾಡಿ, ಸುಮಲತಾ ಗೆಲುವಿಗೆ ಬೆನ್ನೆಲುಬಾಗಿದ್ದರು.

Tags: