ಮೈಸೂರು: ಡಾಲಿ ಧನಂಜರ್ ಅವರ ಮದುವೆ ಇದೇ ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ನಡೆಯಲಿದೆ.
ಈಗಾಗಲೇ ಅಭಿಮಾನಿಗಳಿಗೆ, ಚಲನಚಿತ್ರ ನಟರಿಗೆ, ರಾಜಕೀಯ ಗಣ್ಯರಿಗೆ ಮದುವೆ ಆಹ್ವಾನ ನೀಡಿರುವ ನಟ ಡಾಲಿ ಧನಂಜಯ್ ಅವರು, ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.
ಡಾಲಿ ಮದುವೆಗೆ ಇನ್ನು ಮೂರು ದಿನ ಬಾಕಿಯಿದ್ದು, ಅವರ ಮನೆಯಲ್ಲಿ ಮದುವೆಯ ಶಾಸ್ತ್ರಗಳು ಈಗಾಗಲೇ ಶುರುವಾಗಿವೆ.
ಧನಂಜಯ್ ಅವರ ಹುಟ್ಟೂರು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಡಾಲಿ ಮದುವೆ ಸಂಭ್ರಮ ಕಳೆಗಟ್ಟಿದೆ.
ಕುಟುಂಬದ ಸಂಪ್ರದಾಯದಂತೆ ದೇವರಿಗೆ ಪೂಜೆ ಸಲ್ಲಿಸುವ ಕಾರ್ಯಗಳು ನಡೆದಿವೆ. ತಮ್ಮ ಮನೆ ದೇವರಾದ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ನಟ ಡಾಲಿ ದೇವರ ಫೋಟೋವನ್ನು ಹಿಡಿದುಕೊಂಡು ಕೊಂಡ ತುಳಿದಿದ್ದಾರೆ.
ಈ ಮೂಲಕ ಮದುವೆಗೂ ಮೊದಲು ನಟ ಡಾಲಿ ಧನಂಜಯ್ ಅವರು, ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿಗೆ ತೀರಿಸಬೇಕಾದ ಹರಕೆಯನ್ನು ಭಕ್ತಿ-ಭಾವದಿಂದ ನೆರವೇರಿಸಿದ್ದಾರೆ.





