Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

90ರ ದಶಕದ ಕಡಲ ತೀರದ ಕಥೆ ‘ಆಸ್ಟಿನ್‍ನ ಮಹಾನ್‍ ಮೌನ’…

asteen mahan mouna

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ 90ರ ದಶಕದ ಹಲವು ಕಥೆಗಳು ತೆರೆಯ ಮೇಲೆ ಬಂದಿದೆ. ‘1990ಸ್‍’, ‘ವಿಷ್ಣುಪ್ರಿಯಾ’ ಮುಂತಾದ ಚಿತ್ರಗಳು 90ರ ದಶಕದ ಕಾಲಘಟ್ಟದ ಕಥೆಗಳನ್ನು ಹೇಳುತ್ತವೆ. ಈ ಸಾಲಿಗೆ ಇದೀಗ ‘ಆಸ್ಟಿನ್‍ನ ಮಹಾನ್‍ ಮೌನ’ ಎಂಬ ಹೊಸ ಚಿತ್ರವೂ ಸೇರಿದೆ.

ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ, ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡಿರುವಂತಹ ‘ಆಸ್ಟಿನ್‍ನ ಮಹಾನ್‍ ಮೌನ’ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬಿಡುಗಡೆ ನಡೆಯಿತು.

ಒಂದಿಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರವ ವಿನಯ್‍, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ವಿನಯ್‍, ‘ನಾನು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮುಗಿಸಿದ ನಂತರ ಚಿತ್ರರಂಗದ ಬಗೆ ಆಸಕ್ತಿ ಇದ್ದಿದ್ದರಿಂದ, ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಪುನೀತ್ ರಾಜಕುಮಾರ್ ಅಭಿನಯದ ಚಿತ್ರದಲ್ಲೂ ಕೆಲಸ ಮಾಡಿದ್ದೆ. ನಂತರ ಕಿರು ಚಿತ್ರಗಳನ್ನು ನಿರ್ದೇಶನ ಮಾಡುತ್ತಾ ತಾಂತ್ರಿಕ ವಿಭಾಗದಲ್ಲಿ ಹೆಚ್ಚು ಅನುಭವವನ್ನು ಪಡೆದು ಕೊಂಡಿದ್ದೇನೆ. ಸುಮಾರು 13 ವರ್ಷಗಳ ನಂತರ ನನ್ನ ಕನಸು ಈಗ ನನಸಾಗುತ್ತಿದೆ’ ಎಂದರು.

ಈ ಚಿತ್ರದ ಶೀರ್ಷಿಕೆ ಕಥೆಗೆ ಸೂಕ್ತವಾಗಿದ್ದು ಎನ್ನುವ ವಿನಯ್‍, ‘ಹಾಗಾಗಿ ಅದನ್ನೇ ಇಟ್ಟಿದ್ದೇನೆ. ಇದೊಂದು ಎಮೋಷನಲ್, ಲವ್, ಥ್ರಿಲ್ಲಿಂಗ್ ಕಥೆಯನ್ನು ಒಳಗೊಂಡಿದೆ. ಆಸ್ಟಿನ್ ಎನ್ನುವುದು ನಾಯಕನ ಪಾತ್ರದ ಹೆಸರು. ಈ ಚಿತ್ರದಲ್ಲಿ ನನ್ನದು ಎರಡು ಶೇಡ್‍ಗಳಲ್ಲಿ ಬರುವಂತಹ ಪಾತ್ರ. ಈ ಚಿತ್ರದಲ್ಲಿ ಇರುವ ಎಲ್ಲಾ ಪಾತ್ರಗಳು ಕ್ರಿಶ್ಚಿಯನ್ ಧರ್ಮದ್ದಾಗಿದ್ದು, 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು ಒಳಗೊಂಡಿದೆ. 2023ರಲ್ಲಿ ಆರಂಭಗೊಂಡ ಈ ಚಿತ್ರ ಮೈಸೂರು, ಹೊನ್ನಾವರ ಹಾಗೂ ಚಿಕ್ಕಮಗಳೂರು ಸೇರಿದಂತೆ ಸುಮಾರು 23 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಸೆಪ್ಟಂಬರ್ 5ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ’ ಎಂದರು.

ವಿನಯ್‍ಗೆ ನಾಯಕಿಯಾಗಿ ರಿಷಾ ಗೌಡ ಮತ್ತು ಪ್ರಕೃತಿ ಪ್ರಸಾದ್‍ ನಟಿಸಿದ್ದಾರೆ. ವಿಶೇಷವೆಂದರೆ, ಇಬ್ಬರೂ ಮೈಸೂರಿನವರು. ಮಿಕ್ಕಂತೆ ಬಲ ರಾಜವಾಡಿ, ರಾಘು ರಾಮನಕೊಪ್ಪ, ಜಗಪ್ಪ, ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರಾಜಕಾಂತ್ ಛಾಯಾಗ್ರಹಣ, ವಿಶ್ವಿ ಸಂಗೀತವಿದೆ.

Tags:
error: Content is protected !!