Mysore
23
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ದ್ವಿತೀಯ ಪಿಯು ಪರೀಕ್ಷೆಯ 2023ರ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2022–23ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾ ಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೋಮವಾರ ಪ್ರಕಟಿಸಿದೆ.

ಮಾರ್ಚ್‌ 9ರಿಂದ 29ರವರೆಗೆ ಪರೀಕ್ಷೆಗಳು ನಡೆಯಲಿವೆ.

ಮಾರ್ಚ್‌ 9ರಂದು ಕನ್ನಡ, ಅರೇಬಿಕ್‌, 11ರಂದು ಗಣಿತ, ಶಿಕ್ಷಣಶಾಸ್ತ್ರ

13ರಂದು ಅರ್ಥಶಾಸ್ತ್ರ

14ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ವಿಜ್ಞಾನ, ಮೂಲಗಣಿತ

15ರಂದು ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌

16ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

17ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್‌, ಆಟೊಮೊಬೈಲ್‌, ಆರೋಗ್ಯರಕ್ಷಣೆ, ಸೌಂದರ್ಯ ಮತ್ತು ಕ್ಷೇಮಶಾಸ್ತ್ರ

18ರಂದು ಭೂಗೋಳ ವಿಜ್ಞಾನ, ಜೀವ ವಿಜ್ಞಾನ

20ರಂದು ಇತಿಹಾಸ, ಭೌತವಿಜ್ಞಾನ

21ರಂದು ಹಿಂದಿ

23ರಂದು ಇಂಗ್ಲಿಷ್‌

25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

27ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ವಿಜ್ಞಾನ, ಗೃಹ ವಿಜ್ಞಾನ

29ರಂದು ಸಮಾಜ ವಿಜ್ಞಾನ, ವಿದ್ಯುನ್ಮಾನ, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಈ ಸಂಬಂಧ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರೂ ಕೂಡ ಟ್ವೀಟ್‌ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!