Mysore
23
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನಿನ್ನೆ ಮೊನ್ನೆ ನಮ್ಮ ಜನ: ವೀರಪ್ಪನ್ ಕೊಡಿಸಿದ ಉಪ್ಪಿಟ್ಟು ತಿಂದೆ!

ಆತ ತುಂಬು ಆಸಕ್ತಿವಹಿಸಿ ದುಭಾಷಿಯಾಗಿ ನೆರವು ನೀಡಿದಸತ್ತವರ ಇತ್ಯೋಪರಿಗಳನ್ನು ಕೇಳಿಕೊಂಡು ತಿಳಿಸುತ್ತಾ ಹೋದನಮ್ಮ ಕೆಲಸ ಸುಸೂತ್ರವಾಯಿತು.

ಏನು ಕೆಲಸ ಮಾಡ್ತಿದ್ದೀರಿ?” ಕೇಳಿದೆ.

ಫಾರೆಸ್ಟ್ ಕಂತ್ರಾಟು ಮಾಡ್ತಿದ್ದೇನೆ” ಅವನೆಂದ.

ಹೆಸರುವೀರಪ್ಪನ್ !

ಎರಡು ಗಂಟೆ ವೇಳೆಗೆ ನನ್ನ ಕೆಲಸ ಮುಗಿಯಲು ಬಂದಿತ್ತುಶವಗಳನ್ನು ಪೋಸ್ಟ್‌ಮಾರ್ಟಂ ಮಾಡಲು ಡಾಕ್ಟರಿಗೆ ಒಪ್ಪಿಸಬೇಕಿತ್ತುಪೋಸ್ಟ್‌ಮಾರ್ಟಂ ಮಾಡಿಸಿಯಾದ ಮೇಲೆ ಶವಗಳನ್ನು ಅವರವರ ರಕ್ತಸಂಬಂಧಿಗಳಿಗೆ ನೀಡಿ ರಸೀತಿ ಪಡೆಯಬೇಕಿತ್ತುಅಷ್ಟಾದರೆ ನಮ್ಮ ಮುಖ್ಯ ಕೆಲಸ ಮುಗಿದಂತೆ.

ಹೆಣಗಳ ಬಳಿಗೆ ಊಟ ತರಕೂಡದೆಂದು ಅಲ್ಲೇ ಹತ್ತಿರದಲ್ಲಿ ನಮ್ಮಗಳ ಊಟದ ಪ್ಯಾಕೆಟ್ ಇರಿಸಿದ್ದಾರಂತೆ.

ಪೊಲೀಸ್ನೋರಿಗೆಲ್ಲಾ ಇಲ್ಲೇ ಊಟ ಬಂದೈತೆಬೇಗ ಹೊಂಡಿ ಸಾಮಿಮುಗಿದೋಯ್ತದೆ!” ಎಂದು ನಮ್ಮ ತೊಳಿಲಾಳಿ ಒಂದೇ ಸಮನೆ ವರಾತ ಹಚ್ಚಿದ್ದಮೃತರ ಕಡೆಯವರ ಆಕ್ರಂದನ ನಡೆಯುತ್ತಿರುವಾಗ ಊಟಕ್ಕೆ ಹೋಗುವುದಾದರೂ ಹೇಗೆ?

ಶವ ಸಂದ ರಸೀತಿ ಪತ್ರವೂ ರೆಡಿಯಾಯಿತುಪೋಸ್ಟ್ ಮಾರ್ಟಂ ನಡೆಸಲು ಇನ್ನೂ ಸಮಯವಿತ್ತುಬಂದಿದ್ದ ಹತ್ತಾರು ಡಾಕ್ಟರುಗಳು ಒಂದೊಂದೇ ಹೆಣವನ್ನು ಪರೀಕ್ಷಿಸುತ್ತಿದ್ದರು.

ನಿಂತ ನಿಲುವಿನಲ್ಲಿ ಬಂದಿದ್ದರಿಂದ ಪ್ರಾತಃರ್ವಿಧಿಗಳೇ ಆಗಿರಲಿಲ್ಲಬೇಲಿ ಮರೆಯಲ್ಲಿ ಮುಗಿಸೋಣವೆಂದರೆಎಲ್ಲೂ ನೀರೇ ಇಲ್ಲಬೃಹತ್ ಕೆರೆ ಬಗಾಲೆದ್ದು ಬರಿದಾಗಿ ಹೋಗಿದೆ.

ವೀರಪ್ಪನ್ ಬಳಿ ಕಷ್ಟ ಹೇಳಿಕೊಂಡೆ. “ಬನ್ನಿ ಸಾರುಕರಕೊಂಡು ಹೋಗ್ತೀನಿ” ಎಂದು ಅದೆಲ್ಲಿಂದಲೋ ಮೊಪೆಡ್ ತಂದ.

ನಮ್ಮ ಪೊಲೀಸರಿಗೆ ಊಟ ಮಾಡಿಕೊಳ್ಳುವಂತೆ ಹೇಳಿ ಮೊಪೆಡ್ ಹತ್ತಿದೆಅವನು ನೀರಿನ ಬಳಿಗೆ ಬಿಟ್ಟಹೊರೆ ಇಳಿಸಿದ ಮೇಲೆ ಹೊಟ್ಟೆಯ ಚಿಂತೆಬೆಳಗಿನಿಂದ ಏನೂ ತಿಂದಿರಲಿಲ್ಲ. “ಹತ್ತಿರದಲ್ಲಿ ಹೋಟೆಲಿದೆಯೇಊಟ ಸಿಗದಿದ್ದರೂ ಪರವಾಗಿಲ್ಲಬಾಳೆಹಣ್ಣುಬನ್ನು ಸಿಕ್ಕಿದರೂ ಸಾಕುಜನ ಗೋಳಾಡ್ತಾ ಇದ್ದಾರೆಈ ಟೈಮಲ್ಲಿ ಹೆಣಗಳ ಹತ್ತಿರ ಹೋಗಿ ಊಟಮಾಡೋದು ಸರಿಯಾಗಲ್ಲ” ಎಂದೆ.

ನೀವ್ಯಾಕೆ ಯೋಸ್ನೆ ಮಾಡ್ತೀರಿ ಸಾರುತಿಂಡಿ ಮೊದ್ಲೇ ರೆಡಿ ಮಾಡ್ಸಿದ್ದೀವಿ” ಎಂದು ಪಕ್ಕದ ಹಳ್ಳಿಗೆ ಕರೆದೊಯ್ದಅಲ್ಲೊಂದು ಮನೆಯಲ್ಲಿ ಉಪ್ಪಿಟ್ಟು ಮಾಡಿಸಿದ್ದರುನಾಲ್ಕಾರು ಅಧಿಕಾರಿಗಳು ಆಗಲೇ ಮೆಲ್ಲುತ್ತಿದ್ದಾರೆಉಪ್ಪಿಟ್ಟಿನ ಜೊತೆಗೆ ಗಟ್ಟಿ ಮೊಸರು ಬೇರೆ !

ತಿಂಡಿ ತಿನ್ನುವಾಗಲೇ ಇನ್‌ಸ್ಪೆಕ್ಟರ್ ಜೀಪಿಗೆ ಮೆಸೇಜ್ ಬಂತುಇನ್‌ಕ್ವೆಸ್ಟ್ ಕೆಲಸ ಮುಗಿಸಿದ್ದವರು ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿಪ್ಯಾಡ್ ಬಳಿಗೆ ಹೋಗತಕ್ಕದ್ದುಮುಖ್ಯಮಂತ್ರಿ ಗುಂಡೂರಾವ್ ಬರುತ್ತಿದ್ದಾರೆ ಎಂಬ ಕರೆ.

ಅದು ನಾವಿದ್ದ ಜಾಗದ ಹತ್ತಿರದಲ್ಲೇ ಇತ್ತು.

ಅಲ್ಲಿಗೇ ವೀರಪ್ಪನ್ ನನ್ನನ್ನು ಕರೆದೊಯ್ದು ಬಿಟ್ಟಮುಖ್ಯಮಂತ್ರಿಗಿಂತ ಹೆಲಿಕಾಪ್ಟರ್ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ತುಂಬಿದ್ದರು.

ಹೆಲಿಕಾಪ್ಟರ್ ಬರಲು ಸಮಯವಿತ್ತುಅವನೊಡನೆ ಅದೂ ಇದೂ ಮಾತಾಡುತ್ತಿರುವಾಗ ಗುಂಡೂರಾಯರು ಬಂದರು.

ಅಂತ್ಯಸಂಸ್ಕಾರ ಮಾಡಿಸಬೇಕೆಂದು ಹೇಳಿದ ವೀರಪ್ಪನ್ ಹಾಗೇ ಅದೃಶ್ಯನಾದ.

ಅದೇ ಕೊನೆಮತ್ತೆಂದೂ ಅವನ ಭೆಟ್ಟಿಯಾಗಲಿಲ್ಲಆದರೆ ತಮಿಳು ಕೇಡಿ ನಟ ವೀರಪ್ಪನ್ ಹೆಸರು ಪ್ರಸ್ತಾಪವಾದಾಗಲೆಲ್ಲ ಅವನ ಉಪ್ಪಿಟ್ಟಿನ ಆತಿಥ್ಯದೊಡ್ಡ ಮೂಗುಅಚ್ಚ ಬಿಳಿ ಹಲ್ಲು ಆಗಾಗ್ಗೆ ನೆನಪಾಗುತ್ತಿತ್ತು.

1986ರ ನಂತರ ವೀರಪ್ಪನ್ ಹೆಸರು ಸುದ್ದಿಯಾಗತೊಡಗಿತುಬೂದಿಪಡಗ ಗೆಸ್ಟ್ ಹೌಸಿನಿಂದ ಪರಾರಿಯಾದ ಸುದ್ದಿ ತಿಳಿದಾಗ ಚಿಕ್ಕ ಅನುಮಾನ ಮೂಡಿತುಅಂದು ನೆರವಿತ್ತ ಉಪ್ಪಿಟ್ಟು ವೀರಪ್ಪನ್ ಇವನೇ ಇರಬಹುದೇಯಾಕೆಂದರೆ ಇಬ್ಬರ ಊರೂ ಅದೇ ಗೋಪಿನಾಥಂ ಅಲ್ಲದೆ ಆ ದಿನಗಳಲ್ಲಿ ಅವನದೊಂದು ಫೋಟೋ ಎಲ್ಲ ಪತ್ರಿಕೆಗಳಲ್ಲೂ ಬರುತ್ತಿತ್ತುಎಲ್ಲರ ಬಳಿ ಇದ್ದದ್ದು ಅದೊಂದೇ ಫೋಟೋನಾನು ನೋಡಿದ್ದ ವೀರಪ್ಪನ್‌ಗೆ ಹೋಲುತ್ತಿದ್ದ ಫೋಟೋ.

1988ರ ವೇಳೆಗೆ ವೀರಪ್ಪನ್ ಹಾವಳಿ ಮಿತಿಮೀರಿ ಅವನನ್ನು ಹಿಡಿಯಲು ಮೈಸೂರಿನ ಅಧಿಕಾರಿಗಳನ್ನು ಸರದಿಯಲ್ಲಿ ನಿಯೋಜಿಸತೊಡಗಿದರುಅದರಂತೆ ನನಗೂ ತಿಂಗಳಿಗೊಮ್ಮೆ ಡ್ಯೂಟಿ ಬೀಳುತ್ತಿತ್ತುನಾಲ್ಕಾರು ಸಬ್ ಇನ್‌ಸ್ಪೆಕ್ಟರ್‌ಗಳು ಒಟ್ಟಿಗೆ ಹೋಗಿ ವಾರವಿದ್ದು ಬರುತ್ತಿದ್ದೆವುಅವನನ್ನು ಹೇಗೆ ಹಿಡಿಯಬೇಕುಮಾಡಿರುವ ಕೃತ್ಯಗಳೇನುಕಾರ್ಯಾಚರಣೆಯ ತಂತ್ರಗಳೇನುಒಂದೂ ಗೊತ್ತಾಗುತ್ತಿರಲಿಲ್ಲಬಂದವ ರಾಮನೋಹೋದವ ಭೀಮನೋಗೊತ್ತಿಲ್ಲಎಲ್ಲವೂ ಗುಪ್ತ್ ಗುಪ್ತ್ಗಪ್ ಚುಪ್! 30-40 ಮಂದಿ ಸೇರಿ ಕೂಂಬಿಂಗ್ ತೀವ್ರ ತಲಾಶ್ ಮಾಡುತ್ತಿದ್ದೆವುಅದೆಷ್ಟು ದುರ್ಗಮ ದಟ್ಟ ಕಾಡೆಂದರೆ ಆರೇಳು ಅಡಿ ದೂರದ ಪೊದೆಯಲ್ಲಿ ಒಬ್ಬ ಅವಿತಿದ್ದರೂ ಕಾಣಿಸುತ್ತಿರಲಿಲ್ಲಬೆಕ್ಕನ್ನು ಹುಡುಕುವವರಂತೆ ಮೌನವಾಗಿ ಹುಶ್ ಹುಶ್ ಎನ್ನುತ್ತಾ ಹುಡುಕುತ್ತಿದ್ದೆವುಒಬ್ಬರಿಗೂ ಒಂದು ಸ್ಪಷ್ಟ ಗುರಿಹೀಗೇ ಹಿಡಿಯಬೇಕೆಂಬ ಛಲ ಇರಲಿಲ್ಲಹಂಗೇ ಹುಡುಕಿಕೊಂಡು ಹೋದ್ರೆ ಅವನಾಗಿಯೇ ಸಿಕ್ತಾನೆಆಗ ಶತಾಯ ಗತಾಯ ಮುಗಿಬಿದ್ದು ಹಿಡ್ಕೊಳ್ಳೋದುಇದಿಷ್ಟೇ ನಮಗಿದ್ದ ಆದೇಶಅವನೊಬ್ಬ ದಂತಚೋರಫಾರೆಸ್ಟ್ ಇಲಾಖೆಯ ಕೆಲವರನ್ನು ಕೊಂದಿದ್ದಾನೆ ಎಂಬುದನ್ನು ಬಿಟ್ಟರೆಬೇರಾವ ಮಾಹಿತಿಯ ಉಸಿರನ್ನೂ ಆಗಿನ ಅಧಿಕಾರಿಗಳು ಬಿಡುತ್ತಿರಲಿಲ್ಲಮಾಹಿತಿ ಲೀಕಾದರೆ ಸಿಕ್ಕುವ ಕಳ್ಳನೂ ನುಣುಚಿಕೊಳ್ಳುತ್ತಾನೆ ಎಂಬ ಮುಂಜಾಗ್ರತೆಆದರೆ ನನಗಿದ್ದದ್ದು ಒಂದೇ ಕುತೂಹಲಗೋಪಿನಾಥಂನಲ್ಲಿ ಸಿಕ್ಕು ಸಹಾಯ ಮಾಡಿದ್ದವನು ಇದೇ ವೀರಪ್ಪನ್ ಇರಬಹುದೇ?

ವೀರಪ್ಪನ್ ಕಾರ್ಯಾಚರಣೆ ಎಂದರೆ ದೂರದ ದಿಂಬಂಹೊಗೇನಕಲ್ ಜಲಪಾತಸತ್ತಿ ತನಕ ಜೀಪಿನಲ್ಲಿ ಹೋಗಿ ವಾಪಸ್ ಬರುವುದುಅವನೇನು ಬಸ್ಸಿಗಾಗಿ ಕಾದು ಕುಳಿತಂತೆ ರಸ್ತೆ ಬದಿ ಕೂತಿರುತ್ತಾನಾಎಂದು ನಮ್ಮ ನಮ್ಮಲ್ಲೇ ಹುಡುಗಾಟಿಕೆ ಮಾತಾಡಿಕೊಂಡು ಜಾಲಿ ಟ್ರಿಪ್ ಮಾಡುತ್ತಿದ್ದೆವು.

ಎಲ್ಲಿ ಮಾಹಿತಿ ಸೋರಿಕೆಯಾದೀತೋ ಎಂಬುದು ಆಗಿನ ಅಧಿಕಾರಿಗಳ ಭಯಆತಂಕಪ್ರತಿಯೊಂದನ್ನೂ ಅತಿ ಗೋಪ್ಯತೆ ಮಾಡುತ್ತಿದ್ದರುಸಲಹೆ ಸೂಚನೆಗಳ ಮಾರ್ಗದರ್ಶನವೇ ಇಲ್ಲದಿದ್ದಾಗ ನಮಗಾದರೂ ಗಂಭೀರತೆ ಹೇಗೆ ತಾನೇ ಬಂದೀತು?

ಆದರೆಹೊಗೇನಕಲ್ ಫಾಲ್ಸ್ ತನಕ ಹೋಗುವುದೆಂದರೆ ಖುಶಿಯೋ ಖುಷಿಜಲಪಾತದ ದಭೆ ದಭೆಗೆ ತಲೆಯೊಡ್ಡಿ ನಿಂತರೆ ಮೈಕೈ ನೋವೆಲ್ಲಾ ಮಾಯವಾಗುತ್ತಿತ್ತುಮೈ ಮನಸ್ಸು ನಿರಾಳವಾಗುತ್ತಿತ್ತುಈ ಜಲಕ್ರೀಡೆಯ ನಂತರ ವಿವಿಧ ಜಾತಿ ಮೀನಿನ ಸುಖ ಭೋಜನವಾಪಸಾಗುವಾಗ ರಸ್ತೆಯೂದ್ದಕ್ಕೂ ಗಡದ್ದು ನಿದ್ದೆವಾರಕ್ಕೆ ಯಾಂತ್ರಿಕ ಡ್ಯೂಟಿ ಮುಗಿಯುತ್ತಿತ್ತುಮುಂದಿನ ಬ್ಯಾಚಿನವರದೂ ಇದೇ ಕತೆ.

ಹಿಡಿಯುವಿಕೆಯ ನಮ್ಮ ವಿಧಾನವೇ ತುಂಬ ಬಾಲಿಶವಾಗಿರುತ್ತಿತ್ತು ಎನ್ನದೆ ವಿಧಿಯಿಲ್ಲಯಾವನೋ ತಲೆ ಮಾಸಿದವನ ಮಾಹಿತಿ ನಂಬಿಕೊಂಡು ಗುಡ್ಡವನ್ನೆಲ್ಲಾ ಹತ್ತಿ ಹುಡುಕಿ ಜಾಲಾಡಿದ್ದುಂಟುಆಗಿನ ಕಾರ್ಯಾಚರಣೆ ನೆನೆದರೆ ನಗು ಬರುತ್ತದೆ.

ವೀರಪ್ಪನ್ ಯಾವುದೋ ಪೊಟರೆಯಲ್ಲೋಗುಹೆಯಲ್ಲೋ ಅವಿತು ಕೂತಿರುತ್ತಾನೆಒಳನುಗ್ಗಿದರೆ ಸಾಕುಇಲಿ ಮರಿಯಂತೆ ಮುದುರಿ ಕೂತಿರುವ ಅವನನ್ನು ಇಕ್ಕಳದಲ್ಲಿ ಸಿಕ್ಕಿಸಿದಂತೆ ಎತ್ತಿಕೊಂಡು ಬರುವುದುಏನೇ ಮಾರಕಾಸ್ತ್ರ ಇದೆ ಎಂದರೂಪೊಲೀಸ್ ಪಡೆ ನೋಡಿದರೆ ಸಾಕು ಹೆದರಿ ಸರಂಡರ್ ಆಗುತ್ತಾನೆನಮ್ಮನ್ನು ಕಂಡರೆ ಅಷ್ಟು ಭಯ ಭೀತಿ ಇರುವುದರಿಂದಲೇ ಬಡ್ಡಿಮಗ ಎಲ್ಲೋ ಅವಿತಿದ್ದಾನೆ ಎಂಬ ದೃಢ ನಂಬಿಕೆಅವನು ವೀರನಲ್ಲಹೇಡಿ ಶುದ್ಧ ಹೇಡಿ ಎಂದು ಅನೇಕ ಅಧಿಕಾರಿಗಳುಮಂತ್ರಿಗಳು ಹೇಳಿಕೆ ಸಹ ಕೊಟ್ಟಿದ್ದರು.

ಅದೇನೋ ವೀರಪ್ಪನ್ ಡ್ಯೂಟಿ ಎಂಬುದು ಎಲ್ಲರಿಗೂ ನಾಮ್ಕಾವಾಸ್ತೆ ಕೆಲಸಎಲ್ಲೋ ಹೆದರಿ ಮುದುರಿ ಕೂತಿರುತ್ತಾನೆಹೆಡೆಮುರಿ ಕಟ್ಟಿ ತರುವುದು ಎಂಬ ಲಘು ಧೋರಣೆಅವನು ನಮ್ಮ ಮೇಲೆ ಫೈರ್ ಮಾಡಬಹುದು ಎಂಬುದೂ ಮುಖ್ಯವಾಗಿರಲಿಲ್ಲನನ್ನನ್ನೂ ಸೇರಿದಂತೆ ಎಷ್ಟೋ ಬಾರಿ ಪಿಸ್ತೂಲನ್ನೇ ಕೊಂಡೊಯ್ಯುತ್ತಿರಲಿಲ್ಲಅದೊಂದು ಅನಗತ್ಯ ಹೊರೆತಂಡದ ಪೊಲೀಸರು ರೈಫಲ್‌ಧಾರಿಗಳಾಗಿರುತ್ತಿದ್ದರುಒಬ್ಬರ ಬಳಿ ಪಿಸ್ತೂಲ್ ಇದ್ದರೆ ಸಾಕಲ್ಲಾ ಎಂಬ ಉಡಾಫೆ!

ತಂಡ ಕಟ್ಟಿಕೊಂಡಿದ್ದಾನೆ ಎಂದರೆ ಎಷ್ಟು ಜನರ ತಂಡಬೆರಳೆಣಿಕೆಯ ಹತ್ತಾರು ಜನಎಲ್ಲರೂ ಹಳ್ಳಿ ಗಾಮಾಡುಗಳುತರಬೇತಿ ಪಡೆದು ಆಧುನಿಕ ಶಸ್ತಾಸ್ತ್ರ ಹೊಂದಿರುವ ಪೊಲೀಸರಿಗೆ ಕೈಯಲ್ಲಿ ಕಾಡುತೂಸಿನ ಬಂದೂಕ ಇದ್ದರೆ ಸಾಕೇಪೊಲೀಸರನ್ನು ಹೊಡೆಯುವ ತಂತ್ರಗಾರಿಕೆ ಅವಕ್ಕೆಲ್ಲಿ ಬರಬೇಕುನಮ್ಮನ್ನು ಕಂಡೊಡನೆ ಸರಂಡರ್ ಆಗ್ತಾನೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲೇ ನಾವೆಲ್ಲಾ ಇದ್ದದ್ದುಕೈಗೊಮ್ಮೆ ಸಿಕ್ಕಲಿ ಏನು ಮಾಡ್ತೀವಿ ನೋಡ್ತಿರಿ ಎಂಬ ಒಣ ಹಮ್ಮು ನಮ್ಮೆಲ್ಲರಲ್ಲೂ ಇತ್ತು.

ಯಾವಾಗ ನಾಲ್ಕು ಜನ ಸಬ್‌ಇನ್‌ಪ್ಸೆಕ್ಟರ್‌ಗಳುಒಬ್ಬ ಡಿಸಿಎಫ್‌ರ ರುಂಡ ಕತ್ತರಿಸಿ ಚೆಂಡಾಡಿದನೋ ಆಗ ಕೊಂಚ ಸೀರಿಯಸ್‌ನೆಸ್ ಬಂತುಹಾಗೆಯೇ ಯಾವಾಗ ಷಕೀಲ್ಹರಿಕೃಷ್ಣ ಹತ್ಯೆಯಾದರೋ ಮತ್ತು ತಮಿಳುನಾಡಿನ 23 ಜನ ಪೊಲೀಸರಿದ್ದ ವ್ಯಾನನ್ನು ಸ್ಛೋಟಿಸಿದನೋ ಆಗ ಪೊಲೀಸರ ದಪ್ಪ ಚರ್ಮ ಅದುರಿತುಆದರೂ ನಮ್ಮ ಒಣಜಂಭ ಕರಗಿರಲಿಲ್ಲಅವನಿಂದ ಹತ್ಯೆಯಾದವರ ವೈಫಲ್ಯಗಳನ್ನೇ ಎತ್ತಿ ಆಡಿಕೊಂಡುವೀರಪ್ಪನ್‌ನ ಶಕ್ತಿ ಸಾಮರ್ಥ್ಯವನ್ನು ಕಳಪೆ ಮಾಡಿ ನೋಡುತ್ತಿದ್ದೆವು.

ಕೊನೆಗೂ ಗಂಭೀರತೆ ಬಂದದ್ದು ಶಂಕರ ಬಿದರಿ ನೇತೃತ್ವದ stf ಅಸ್ತಿತ್ವಕ್ಕೆ ಬಂದಾಗಅಲ್ಲೀವರೆಗೂ ಕಾಡು ಬಿಟ್ಟು ಅವನೆಲ್ಲಿ ಹೋಗ್ತಾನೆಸಿಕ್ಕೇ ಸಿಕ್ತಾನೆ ಎಂಬ ಕುರುಡು ನಂಬಿಕೆ ಮಾತ್ರವಿತ್ತು.

(ಮುಂದುವರಿಯುವುದು)

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ