Mysore
28
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ತರೀಕೆರೆ ಏರಿಮೇಲೆ : ಸಿಟ್ಟಿನ ಸಿಪಾಯಿಯಾಗಿದ್ದ ರಶೀದ್ ಮಾಮ

 ಲೆದಾಡುತ್ತ ಹೋದ ಅಪ್ಪತನಗೆ ಕೆಲಸ ಕೊಟ್ಟ ಮಾಲೀಕನ ಮಗಳನ್ನು ಪ್ರೀತಿಸಿ ಮದುವೆಯಾಗಿ ಕರೆದುಕೊಂಡು ತನ್ನೂರಿಗೆ ಮರಳಿದನುಅವನ ಹಿಂದೆ ತನ್ನ ಮಡದಿಯ ಅರ್ಥಾತ್ ನನ್ನಮ್ಮನ ಎಳೆವಯಸ್ಸಿನ ತಮ್ಮಂದಿರನ್ನೂ ತಂಗಿಯರನ್ನೂ ಕರೆತಂದನುನನ್ನ ಸೋದರ ಮಾವಂದಿರು ಮದುವೆಯಾಗಿಕ್ರಮೇಣ ಸ್ವತಂತ್ರರಾಗಿ ಹೊರಗೆ ಹೋದರುಆದರೆದೊಡ್ಡಮಾಮ ಮಾತ್ರ ನಮ್ಮಲ್ಲೇ ಬಹುಕಾಲ ಉಳಿದಿದ್ದರುಅವರ ಹೆಸರು ರಶೀದ್ಕೆಂಪಗಿದ್ದರಿಂದ ಲಾಲ್‌ಮಾಮ ಎಂದು ಕರೆಯುತ್ತಿದ್ದೆವು.

ರಶೀದ್ ಮಾಮ ತೆಳ್ಳಗೆಕುಳ್ಳಗೆ ಬಿಲ್ಲಿನಂತಿದ್ದನುಶ್ರಮಜೀವಿಸಿಟ್ಟಿನ ಸಿಪಾಯಿಕೆರಳಿದಾಗ ಕರಕರ ಹಲ್ಲು ಕಡಿಯುತ್ತಿದ್ದನುಮುಖ ಟೊಮೊಟೊ ಹಣ್ಣಾಗುತ್ತಿತ್ತುಅವನಿಗೆ ನಾವೆಲ್ಲ ಹೆದರುತ್ತಿದ್ದೆವುಆದರೂರಶೀದ್ ಮಾಮ ನಮಗೆ ಪ್ರಿಯಆತ ತಾನು ಕಂಡ ದೆವ್ವಗಳ ಕತೆಗಳನ್ನು ನಿರೂಪಿಸುತ್ತಿದ್ದನುನಮ್ಮ ಹಳ್ಳಿಯಿಂದ ತರೀಕೆರೆ ಪಟ್ಟಣಕ್ಕೆ ಹೋಗುವವರು ಹಳ್ಳವೊಂದನ್ನು ದಾಟಬೇಕಿತ್ತುಅಲ್ಲಿ ದೆವ್ವಗಳು ಅವನನ್ನು ಭೇಟಿಯಾಗುತ್ತಿದ್ದವಂತೆಅವನ ಕತೆಗಳ ಪರಿಣಾಮದಿಂದ ನಮಗೆ ಜಗತ್ತಿನ ಎಲ್ಲ ಹಳ್ಳಗಳೂ ಭಯೋತ್ಪಾದಕ ಎನಿಸಿದವು.

ತರೀಕೆರೆಯಲ್ಲಿ ಸದಾ ನಿರ್ಜನವಾಗಿರುತ್ತಿದ್ದ ಕೆರೆಕೋಡಿಯ ಹಳ್ಳ ಮತ್ತು ಖಬರಸ್ಥಾನದ ನಡುವಣ ಪುರಾತನ ಅರಳೀಮರಗಳಿದ್ದ ಹಾದಿಯಲ್ಲಿ ನಾವು ಓಡಾಡಬೇಕಿತ್ತುಆಗ ಅಂಗೈಯಲ್ಲಿ ಜೀವ ಹಿಡಿದುಕೊಂಡುಕುರಾನಿನ ಮಂತ್ರಗಳನ್ನು ಪಠಿಸುತ್ತ ಅದನ್ನು ದಾಟುತ್ತಿದ್ದೆವುಮುನೇಶ್ವರನು ನಡುರಾತ್ರಿ ಅಲ್ಲಿಂದ ಒಂದು ಹೆಜ್ಜೆ ಕಿತ್ತಿಟ್ಟರೆ ಇನ್ನೊಂದು ಹೆಜ್ಜೆಯನ್ನು ಸ್ಮಶಾನದಲ್ಲಿರುವ ಅರಳಿಮರದ ಮೇಲೆ ಇಡುತ್ತಾನೆಂದೂ ಅವನ ಸಂಚಾರ ನಾಯಿಗಳಿಗೆ ಮಾತ್ರ ಕಾಣುವುದರಿಂದ ಅವು ರಾತ್ರಿ ಊಳಿಡುತ್ತವೆಯೆಂದೂ ಮಾಮ ಹೇಳುತ್ತಿದ್ದನುಮಾಮನಿಗೆ ಭೂತ ಪಿಶಾಚಿಗಳಲ್ಲಿ ಮಾತ್ರವಲ್ಲದೆ ಮಾಟ ಮಂತ್ರಗಳಲ್ಲೂ ನಂಬಿಕೆಯಿತ್ತುಅವನಿಗೂ ಅಪ್ಪನಿಗೂ ಯಾವುದೋ ಮಾತಿಗೆ ಜಗಳವಾಯಿತುಮಾಮನು ನಮ್ಮ ಮನೆ ಬಿಟ್ಟು ಬೇರೆಡೆಗೆ ಹೋದನಅವನ ಕುಟುಂಬದ ಕಷ್ಟಗಳಿಗೆ ಅಪ್ಪ ಮಾಡಿಸಿದ ಮಾಟವೇ ಕಾರಣವೆಂದು ಕೊನೆತನಕ ಹಗೆ ಸಾಧಿಸಿದನು.

ರಶೀದ್ ಮಾಮನಿಗೆ ಅಮ್ಮನಂತೆ ಸೆಡವುಕಠೋರತೆಹಟಮಾರಿತನ ಇದ್ದಿತ್ತುಸಣ್ಣ ಮಾತಿಗೂ ಇಪ್ಪತ್ತು ಮೂವತ್ತು ವರ್ಷ ಮಾತುಕತೆಯಿಲ್ಲದೆ ಮುಖ ಹರಿದುಕೊಂಡು ಬದುಕುತ್ತಿದ್ದನುಅವನದು ವ್ಯಂಗ್ಯ ವಿಡಂಬನೆಗಳಿಂದ ಹರಿತಗೊಂಡ ಚಾಕುನಾಲಗೆಎಲ್ಲರೂ ಅವನ ಜತೆ ಮಾತುಕತೆ ತಪ್ಪಿಸುತ್ತಿದ್ದರುಮಾತಾಡಲೇಬೇಕಾದರೆ ತೂಕಮಾಡಿ ಹುಷಾರಿಯಾಗಿ ಮಾತಾಡುತ್ತಿದ್ದರುಮುಖಮುರಿದು ಮಾತಾಡುವುದು ಅವನ ಆಜನ್ಮ ಸ್ವಭಾವಇಂತಹ ಬೆಂಕಿ ನವಾಬನಿಗೆ ಸಿಕ್ಕ ಹೆಂಡತಿತಾಯಿ ಹೃದಯದ ಶಾಂತಾದೇವಿರುಚಿಕರ ಅಡುಗೆಗೂ ಬಂದವರ ಉಪಚಾರಕ್ಕೂ ಖ್ಯಾತೆಮಾಮನಿಂದ ಬೇಸರವಾದರೂ ವಾತ್ಸಲ್ಯಮಯಿಯಾದ ಮಾಮಿಯ ಕಾರಣಕ್ಕಾಗಿ ನಾವುಆತನಿಲ್ಲ್ಲದ ವೇಳೆ ನೋಡಿಕೊಂಡು ಮನೆಗೆ ಹೋಗುತ್ತಿದ್ದೆವುಸಿಡಿಲಿನ ಜತೆ ನೀವಾಗಿದ್ದರಿಂದ ಬದುಕಿದಿರಿ ಎಂದು ಪ್ರಶಸ್ತಿ ಪತ್ರ ನೀಡುತ್ತಿದ್ದೆವು.

ಕೊನೆಗಾಲದಲ್ಲಿ ಮಹಾಧಾರ್ಮಿಕ ಮನುಷ್ಯನಾದ ರಶೀದ್ ಮಾಮತನ್ನ ಪ್ರಾಯದಲ್ಲಿ ಸಿನಿಮಾ ವ್ಯಸನಿಯಾಗಿದ್ದನುಸಿನಿಮಾ ಸನ್ನಿವೇಶ ಮತ್ತು ಸಂಭಾಷಣೆಗಳನ್ನು ಸುಭಾಷಿತಗಳಂತೆ ಮಾತಲ್ಲಿ ಬೆರೆಸಿ ಮಾತಾಡುತ್ತಿದ್ದನುನಾನು ಕಾಲೇಜು ಕಲಿತು ನೌಕರಿ ಮಾಡುವಾಗ, ‘ನೀನು ಸನಾದಿ ಅಪ್ಪಣ್ಣನಿಗೆ ಅವನ ಮಗ ಮಾಡುವಂತೆ ಅಪ್ಪನಿಗೆ ಕೆಲಸದಾಳಾಗಿ ಮಾಡುತ್ತೀಯ’ ಎಂದು ಭವಿಷ್ಯ ನುಡಿದಿದ್ದನುಎಳವೆಯಲ್ಲಿ ಭಯಾನಕವಾಗಿ ಕಾಯಿಲೆಬಿದ್ದ ನನ್ನನ್ನು ಜೋಪಾನ ಮಾಡಿದ್ದರಿಂದನನ್ನ ಮೇಲೆ ಅವನಿಗೆ ವಿಚಿತ್ರ ಹಕ್ಕು ಸಾಧನೆಯಿತ್ತುಇಂತಹ ಕತ್ತಿಯಂತಹ ಮನುಷ್ಯನ ಜತೆ ಒಮ್ಮೆ ನಾನು ಎಚ್ಚರಗೇಡಿಯಾಗಿ ವ್ಯವಹರಿಸಿದೆಲಗ್ನಪತ್ರಿಕೆ ಕೊಡಲು ಮನೆಗೆ ಹೋದೆಮಾಮಿ ‘ಅವರಿಗೊಂದು ಮಾತು ಹೇಳಬೇಕಿತ್ತಪ್ಪ’ಎಂದು ಸೂಚ್ಯವಾಗಿ ಹೇಳಿದರುಮದುವೆಯಾಗುವ ಉಮೇದಿನಲ್ಲಿದ್ದ ನಾನು ಸೂಚನೆಯನ್ನು ಸರಿಯಾಗಿ ಗ್ರಹಿಸಲಿಲ್ಲಮದುವೆಗೆ ಎರಡು ದಿನವಿತ್ತುಮಾಮ ರಸ್ತೆಯಲ್ಲಿ ಸಿಕ್ಕನು. ‘ಮಾಮಾ ಮನೆಗೆ ಹೋಗಿದ್ದೆನೀವಿರಲಿಲ್ಲಮದುವೆಗೆ ಬರಬೇಕು’ಎಂದೆಸರಿ ಎಂದು ವ್ಯಂಗ್ಯವಾಗಿ ನಕ್ಕು ಮುಂದೆ ಹೋದರುಆಗಲಾದರೂ ನನಗೆ ವ್ಯಂಗ್ಯವನ್ನು ಓದಲು ಸಾಧ್ಯವಾಗಲಿಲ್ಲವಿವಾಹಾತುರಾಣಾಂ ನಸೂಕ್ಷ ಂ.

ಅವರು ಮದುವೆಗೆಂದು ಏರ್ಪಾಟು ಮಾಡಿದ್ದ ವಾಹನದಲ್ಲಿ ಬರಲಿಲ್ಲ. ‘ನಾನು ನನ್ನ ದುಡ್ಡಲ್ಲೇ ಚಾರ್ಜು ಹಾಕಿಕೊಂಡು ಬಸ್ಸಲ್ಲಿ ಬರ‍್ತೇನಪ್ಪ’ ಎಂದರುಹಾಗೆಯೇ ಬಂದರು ಕೂಡಆದರೆ ನಿಕಾ ನಡೆಯುವಾಗ ಶಾಮಿಯಾನದೊಳಗೆ ಬರದೆ ಹೊರಗೆ ನನಗೆ ಕಾಣುವಂತೆ ಬಿಸಿಲಲ್ಲಿ ನಿಂತಿದ್ದರುಯಾರೊ ಹೋಗಿ ಒಳಗೆ ಕರೆಯಲು ‘ಅವನು ನನಗೆ ಬೀದಿಯಲ್ಲಿ ಮದುವೆಗೆ ಆಹ್ವಾನ ಕೊಟ್ಟಿದ್ದಾನೆಆದ್ದರಿಂದ ಬೀದಿಯಲ್ಲೇ ನಿಂತು ನಿಕಾ ನೋಡ್ತೀನಿ’ ಎಂದರಂತೆಇದಾದರೂ ನನಗೆ ತಿಳಿದಿದ್ದು ಮದುವೆಯಾದ ಎರಡು ದಿನಗಳ ಬಳಿಕವೇದಿಕೆಯ ಮೇಲಿದ್ದ ನನಗೆ ಮಾಮ ಬಯಲಿನಲ್ಲಿ ಧರಣಿ ನಿಂತಿರುವುದು ಕಂಡಿತು. ‘ಎಲ್ಲೊ ಎಡವಟ್ಟಾಗಿದೆ’ ಎಂದು ಊಹಿಸಿದೆಆರನೆಯ ಇಂದ್ರಿಯ ಹೆಚ್ಚಿನ ಅಪಾಯಕ್ಕೆ ಎಡೆಗೊಡಬೇಡಕೂಡಲೇ ಕಾರ್ಯಾಚರಣೆ ಮಾಡು ಎಂದು ಸೂಚಿಸಿತುನಿಖಾ ಪುಸ್ತಕಕ್ಕೆ ಸಹಿ ಮಾಡಿದವನೇ ನನಗೆ ಕೈಮಿಲಾಯಿಸಲು ಸರತಿ ಸಾಲಲ್ಲಿ ನಿಂತಿದ್ದ ಗೆಳೆಯರನ್ನು ನಿವಾರಿಸಿಬಯಲಲ್ಲಿ ನಿಂತ ಮಾಮನಿಗೆ ಹೋಗಿ ಮೊದಲ ಅಪ್ಪುಗೆ ಕೆಟ್ಟೆಅವರಿಗೆ ತಮಗೆ ಸಿಕ್ಕ ಅಗ್ರ ಮರ್ಯಾದೆಯಿಂದ ಬಹಳ ಸಂತೋಷವಾಯಿತುಎಷ್ಟಾದರೂ ನಾನು ಸಾಕಿದ ಹುಡುಗಕಣ್ಣರಿಯದಿರ್ದೊಡೆ ಕರುಳರಿಯದೆ ಎಂದರಂತೆಕೈಹಿಡಿದು ಶಾಮಿಯಾನದೊಳಗೆ ಕರೆತಂದೆಬಿಸಿಲಲ್ಲಿ ದಣಿದಿದ್ದ ಹಿರಿಯ ಜೀವ ಕುರ್ಚಿಯಲ್ಲಿ ಕುಳಿತು ವಿಶ್ರಮಿಸಿಕೊಂಡಿತುಹೊಟ್ಟೆತುಂಬ ಊಟ ಮಾಡಿತು.

 

ಆದರೆ ನಾನು ಸನಾದಿ ಅಪ್ಪಣ್ಣನ ಮಗನಂತೆ ನನ್ನ ಅಪ್ಪನ ಜತೆ ನಡೆದುಕೊಳ್ಳುವ ಅವರ ಭವಿಷ್ಯವಾಣಿ ನಿಜವಾಯಿತೇ ಇಲ್ಲವೇ ಕೊನೆಗೂ ತಿಳಿಯಲಿಲ್ಲವಿಚಾರಿಸೋಣವೆಂದರೆ ಅಪ್ಪನೂ ಇಲ್ಲಮಾಮನೂ ಇಲ್ಲ.  

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!