Mysore
21
mist

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಇಸ್ಸೀ ಎನಿಸಿದ ಇಫ್ಛಿ ಉದ್ಟಾಟನೆ: ಇಳಿಸಂಜೆ ಹೊತ್ತಲ್ಲಿ ಸುಪ್ರಭಾತ

ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಇಂಗ್ಲಿಷ್ ಹೆಸರಿನ ಸಂಕ್ಷಿಪ್ತ ರೂಪ ಇಫಿ ಎಂದೇ ಹೇಳುವುದು ವಾಡಿಕೆ. ಮೊನ್ನೆ ಬುಧವಾರ ೫೫ನೇ ಇಫ್ಛಿಯ ಉದ್ಘಾಟನಾ ಕಾರ್ಯಕ್ರಮ ಇತ್ತು. ದೇಶ ವಿದೇಶ ಗಳ ಸಿನಿಮಾ ಪ್ರತಿನಿಽಗಳು, ಅತಿಥಿಗಳು ಪಾಲ್ಗೊಂಡ ಈ ಕಾರ್ಯ ಕ್ರಮದ ಗಾಂಭೀರ್ಯವನ್ನೇ ತಿಳಿಯದಂತಿತ್ತು ನಿರೂಪಕರ ಮಾತು. ಸಂಜೆ ೪. ೩೦ಕ್ಕೆ ಆರಂಭವಾಗಬೇಕಾಗಿದ್ದ ಉದ್ಘಾಟನೆಯ ಮಾತು ೫. ೪೫ಕ್ಕೆ ಶುರುವಿಟ್ಟು ಕೊಂಡಿತು. ನಿರೂಪಕರಿಗೆ, ಸಭಾಸದರನ್ನು ಅದರಲ್ಲೂ ಬಾಲ್ಕನಿ ಯಲ್ಲಿದ್ದ ಗೋವಾ ಮಂದಿಯ ಚಪ್ಪಾಳೆ ಮುಖ್ಯವಾಗಿತ್ತೇ ಹೊರತು, ಇದೊಂದು ಅಂತಾ ರಾಷ್ಟ್ರೀಯ ಕಾರ್ಯಕ್ರಮ ಎನ್ನುವುದರ ಗಮನ ಇರಲಿಲ್ಲ. ಕಾರ್ಯಕ್ರಮ ದುದ್ದಕ್ಕೂ ಇದು ನಡೆಯಿತು. ಅತಿಥಿಗಳನ್ನು ಅವರ ಮಾತುಗಳಿಗಾಗಿ ಆಹ್ವಾನಿಸುವ ಬದಲು, ತಾವೇ ಪ್ರಶ್ನೆಗಳನ್ನು ಕೇಳುತ್ತಾ ಕಾಲ ಕಳೆದರು.

ಕಾರ್ಯಕ್ರಮದ ಆರಂಭದಲ್ಲಿ ಭಾರತೀಯ ಸಂಸ್ಕ ತಿಯನ್ನು ಪರಿಚಯಿ ಸುವ ಸಲುವಾಗಿ ಪ್ರಾರ್ಥನಾ ನೃತ್ಯ. ಸಂಜೆಯ ಹೊತ್ತಿಗೆ ‘ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ’ ಎಂದು ನೃತ್ಯ ಆರಂಭವಾದಾಗ ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ. ರಾಮನ ನಂತರ, ಕೃಷ್ಣ, ಶಿವ, ನಂತರ ಗಣಪತಿ. . . ಹೀಗೆ ಪ್ರಾರ್ಥನಾ ನೃತ್ಯವಿತ್ತು.

ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದವರು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿಯವರು. ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜೊತೆ ತೆಂಗಿನ ಗಿಡದ ಕುಂಡಕ್ಕೆ ನೀರೆರೆ ಯುವ ಮೂಲಕ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಗುರೂಜಿ ಅವರ ಸಿನಿಮಾ ನಂಟಿನ ಪರಿಚಯವೂ ಅಲ್ಲೇ ಆಯಿತು. ವಿಶ್ವಶಾಂತಿಗಾಗಿ ಅವರು ಮಾಡುತ್ತಿರುವ ಕೆಲಸಗಳಿಂದ ಪ್ರೇರಿತ ರಾಗಿರುವ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ. ಕೊಲಂಬಿಯಾ ದಲ್ಲಿ ಶಾಂತಿದೂತ ನಾಗಿ ಕೆಲಸ ಮಾಡಿ ಅಲ್ಲಿ ಐವತ್ತು ವರ್ಷಗಳ ಆಂತರಿಕ ದಂಗೆಯನ್ನು ಶ್ರೀಗಳು ಕೊನೆಗಾಣಿಸಿ ದ್ದರು. ಅದೇ ವಿಷಯವನ್ನು ಕಥಾವಸ್ತುವಾಗಿ ಚಿತ್ರ ನಿರ್ಮಿಸಲು ನಿರ್ಮಾಪಕ ಮಹಾವೀರ್ ಜೈನ್ ಮುಂದೆ ಬಂದಿದ್ದು, ಸಿದ್ಧಾರ್ಥ ಆನಂದ್ ನಿರ್ದೇಶಿ ಸಲಿದ್ದಾರೆ.

ನಮ್ಮ ದೇಶದಲ್ಲಿ ಸಾಕಷ್ಟು ಕಥೆಗಳಿವೆ. ಪ್ರತಿಯೊಬ್ಬರ ಬದುಕಿನಲ್ಲೂ ಸಾಕಷ್ಟು ಕಥೆಗಳಿವೆ, ಅವುಗಳನ್ನು ಪರಸ್ಪರ ಹೇಳೋಣ. ಬಂದೂಕು ಎಲ್ಲದ್ದಕ್ಕೂ ಉತ್ತರ ವಲ್ಲ ಎನ್ನುವುದಾಗಿತ್ತು ಅವರ ಆಶಯ. ಚಿತ್ರೋತ್ಸವ ನಿರ್ದೇಶಕ ಶೇಖರ್ ಕಪೂರ್ ಅವರದೂ ಅದೇ ಆಭಿಪ್ರಾಯವಾಗಿತ್ತು. ಅವರು, ‘ಅತ್ಯಧಿಕ ಚಿತ್ರ ಗಳನ್ನು ನಿರ್ಮಿಸುವ ದೇಶ ಭಾರತ. ಇನ್ನಷ್ಟು ಕಥೆಗಳನ್ನು ನಾವು ವಿಶ್ವಕ್ಕೆ ಹೇಳಬಹುದು. ನಮ್ಮ ಚಿತ್ರರಂಗ ದೊಡ್ಡದು. ಈ ಉತ್ಸವವೂ ದೊಡ್ಡದಾಗಬೇಕು’ ಎಂದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರು, ರಾಜ್ಯ ಸಚಿವರು ಇಬ್ಬರೂ ಸಮಾರಂಭದಲ್ಲಿ ಹಾಜರಿರಲಿಲ್ಲ. ವಿಡಿಯೋ ಸಂದೇಶದ ಮೂಲಕ ಅವರು ಉತ್ಸವಕ್ಕೆ ಶುಭಕೋರಿದರು. ಪ್ರಸಾರ ಭಾರತಿಯ ಹೊಸ ಹೆಜ್ಜೆ, ಒಟಿಟಿ ತಾಣದ ಉದ್ಘಾಟನೆ ಈ ಸಂದರ್ಭದಲ್ಲಿ ಆಯಿತು. ರೇಡಿಯೋ, ದೂರದರ್ಶನ ಗಳ ನಂತರ ಇದೀಗ ‘ವೇವ್ಸ್’ ಹೆಸರಿನ ಒಟಿಟಿ ಪ್ರಸಾರ ಭಾರತಿಯ ಮೂಲಕ ಲೋಕಾರ್ಪಣೆಯಾಗಿದೆ. ಅದು ಎಲ್ಲ ಭಾರತೀಯ ಭಾಷೆಗಳಲ್ಲೂ ಲಭ್ಯವಾಗಲಿದೆ ಎನ್ನಲಾಗಿದೆ. ಈಗಾಗಲೇ ಕೇರಳ ಸರ್ಕಾರ ತನ್ನದೇ ಆದ ಒಟಿಟಿ ತಾಣ ಸ್ಥಾಪಿಸಿದೆ. ಮೇಘಾಲಯ ಸರ್ಕಾರವೂ ತನ್ನದೇ ಒಟಿಟಿ ತಾಣ ಹೊಂದಿದೆ ಎನ್ನಲಾಗಿದ್ದು, ಕರ್ನಾಟಕ ಈ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇಟ್ಟಿದೆ.

ಉದ್ಟಾಟನಾ ಸಮಾರಂಭದ ನಿರೂಪಣೆ ಬಹುತೇಕ ಹಿಂದಿಯಲ್ಲೇ ಇದ್ದು, ಮನರಂಜನಾ ಕಾರ್ಯಕ್ರಮ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನಿರೂಪಕರೇ ಕಾರ್ಯಕ್ರಮವನ್ನು ನಿರ್ಧರಿಸಿದ್ದಾರೇನೋ ಎನ್ನುವ ಹಾಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಒಂದು ನಿಮಿಷ ಮಾತನಾಡಲು ಹೇಳಿದರು! ನಿನ್ನೆ ಭಾರತೀಯ ಪನೋರಮಾ ಉದ್ಘಾಟನೆ. ಸಾಮಾನ್ಯವಾಗಿ ಕೇಂದ್ರ ಸಚಿವರು ಅಲ್ಲಿ ಹಾಜರಿರುವುದು ವಾಡಿಕೆ. ಅವರ ಗೈರಿನಲ್ಲಿ ಮುಖ್ಯಮಂತ್ರಿ ಗಳಿಗೆ ಆಹ್ವಾನವಿತ್ತು. ಆದರೆ ಅವರ ಕಾರ್ಯಬಾಹುಳ್ಯವೋ ಆದ್ಯತೆಯ ಬೇರೆ ಕೆಲಸಗಳೋ ಸರಿಯಾದ ಸಮಯಕ್ಕೆ ಅವರು ಅಲ್ಲಿರಲಿಲ್ಲ. ಪ್ರತಿನಿಽಗಳು ಸಿನಿಮಾ ಆರಂಭಿಸಲು ಚಪ್ಪಾಳೆ ತಟ್ಟತೊಡಗಿದ್ದರು.

ಹ್ಞಾಂ, ಉದ್ಘಾಟನಾ ಸಮಾರಂಭದಲ್ಲಿ ಚಿತ್ರೋದ್ಯಮದ ಕೆಲವು ಮಂದಿ ಯನ್ನು, ಸಾಧಕರನ್ನು ಗೌರವಿಸಲಾಯಿತು. ಕಾನ್ ಚಿತ್ರೋತ್ಸವದಲ್ಲಿ ತಮ್ಮ ನಿರ್ದೇಶನದ ವಿದ್ಯಾರ್ಥಿ ಚಿತ್ರಕ್ಕೆ ಪ್ರಶಸ್ತಿ ಪಡೆದ ಚಿದಾನಂದ ನಾಯಕ್ ಮುಖ್ಯರು. ಕನ್ನಡ ನಟಿ ಪ್ರಣೀತಾ ಅವರೂ ಇದ್ದರು. ಚಿತ್ರೋತ್ಸವದಲ್ಲಿ ಶತ ಮಾನೋತ್ಸವ ಗೌರವಕ್ಕೆ ಪಾತ್ರರಾದ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮಗ ನಾಗಾರ್ಜುನ ಮತ್ತು ಸೊಸೆ ಅಮಲಾ ಅಕ್ಕಿನೇನಿ ಅವರನ್ನು ಗೌರವಿಸಲಾ ಯಿತು. ಉದ್ಘಾಟನಾ ಸಮಾರಂಭ ಸ್ಥಳೀಯ ಸಿನಿಮಾ ಸಮಾರಂಭದಂತೆ ನಡೆ ಯಿತೇ ಹೊರತು, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಗಲಿಲ್ಲ.

ಭಾರತದ ೫೫ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭ ವಾಗಿತ್ತು. ಇದೇ ಮೊದಲ ಬಾರಿಗೆ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮಾಧ್ಯ ಮದ ಸದಸ್ಯರಿಗೆ ಒಂದು ದಿನದ ಚಲನಚಿತ್ರ ರಸಗ್ರಹಣ ಶಿಬಿರವನ್ನು ಪಿಐಬಿ, ರಾಷ್ಟ್ರೀಯ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಸಂಸ್ಥೆಯ ಮೂಲಕ ಆಯೋಜಿಸಿತ್ತು. ಒಂದಷ್ಟು ಮಂದಿ ಪಾಲ್ಗೊಂಡಿದ್ದರು. ಅದು ಮುಗಿಯುತ್ತಲೇ ಉದ್ಘಾಟನಾ ಪೂರ್ವ ಪತ್ರಿಕಾಗೋಷ್ಠಿ.

ಗೋವಾ ಸಿಎಂ ಪ್ರಮೋದ್ ಸಾವಂತ್,ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಜಂಟಿ ಕಾರ್ಯದರ್ಶಿ ಪೃಥುಲ್ ಕುಮಾರ್, ಗೋವಾ ಎಂಟರ್ ಟೈನ್‌ಮೆಂಟ್ ಸೊಸೈಟಿಯ ಉಪಾಧ್ಯಕ್ಷೆ ಡೆಲಿಯಾಲ ಲೋಬೋ, ಪಿಐಬಿಯ ಮಹಾನಿರ್ದೇಶಕಿ ಸ್ಮಿತಾ ವತ್ಸ ಶರ್ಮ ಮುಂತಾದವರು ಈ ಪತ್ರಿಕಾ ಗೋಷ್ಠಿಯ ಲ್ಲಿದ್ದರು. ಚಿತ್ರೋತ್ಸವದ ವಿವರಗಳನ್ನು ಪೃಥುಲ್ ಕುಮಾರ್ ನೀಡಿ ದರೆ, ಗೋವಾ ಮುಖ್ಯಮಂತ್ರಿಗಳು ಹೆಚ್ಚು ಹೆಚ್ಚು ಮಂದಿ ಚಿತ್ರೋತ್ಸವದಲ್ಲಿ ಪಾಲ್ಗೊ ಳ್ಳುವಂತೆ ಗೋವಾ ಮಂದಿಗೆ ಕರೆ ನೀಡಿದ್ದು, ಚೋದ್ಯದ ವಿಷಯವಾ ಗಿತ್ತು. ಚಿತ್ರೋತ್ಸವದ ಕುರಿತಂತೆ ಗೋವಾದ ಮಂದಿ ಅಷ್ಟೇನೂ ಉತ್ಸುಕರಾಗಿಲ್ಲ ಎನ್ನುವುದನ್ನು ಇದು ಪರೋಕ್ಷವಾಗಿ ಸಾರಿದಂತಿತ್ತು.

ಚಲನಚಿತ್ರ ಸಂಸ್ಕತಿಯಿಂದ ಸಾಕಷ್ಟು ದೂರವಿರುವ ಗೋವಾದಲ್ಲಿ ಚಿತ್ರೋತ್ಸವ ಆರಂಭವಾದ ಸಂದರ್ಭದಲ್ಲೇ ಇದರ ಪರವಿರೋಧ ಅಭಿಪ್ರಾಯಗಳಿದ್ದವು. ಈ ಬಾರಿ ಪಣಜಿಯಲ್ಲಿ ಮಾತ್ರವಲ್ಲದೆ, ಪೊರ್ವೋರಿಮ್, ಪೊಂಡಾ ಮತ್ತು ಮಡ ಗಾವ್‌ಗಳಲ್ಲಿ ಚಿತ್ರೋತ್ಸವದ ಚಿತ್ರಗಳ ಪ್ರದರ್ಶನ ವ್ಯವಸ್ಥೆ ಆಗಿದೆ. ಗೋವಾದ ಮಂದಿಯನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ. ಆದರೆ ಹೊರರಾಜ್ಯ ಗಳಿಂದ ಬಂದ ಪ್ರತಿನಿಽಗಳಿಗೆ ಇದು ಅನುಕೂಲಕರವಾಗಿಲ್ಲ. ಒಂದೆಡೆಯಿಂದ ಇನ್ನೊಂದೆಡೆ ಹೋಗಲು ಒಂದು ಗಂಟೆ ಪ್ರಯಾಣಿಸಬೇಕು. ಒಂದೆಡೆ ಚಿತ್ರ ವೀಕ್ಷಿಸಿ ಕೂಡಲೇ ಮತ್ತೊಂದು ಜಾಗಕ್ಕೆ ಹೋಗಿ ನೋಡಲು ಅಷ್ಟು ಸಮಯ ಬೇಕು. ಚಿತ್ರೋತ್ಸವವನ್ನು ಯಾರು ಉದ್ಘಾಟಿಸುತ್ತಾರೆ ಎನ್ನುವ ಪ್ರಶ್ನೆಗೆ ಅಲ್ಲಿ ಉತ್ತರ ವಿರಲಿಲ್ಲ. ಸುಮಾರು ೪೦ ಮಂದಿ ಸೆಲೆಬ್ರಿಟಿಗಳು ಬರಲಿದ್ದಾರೆ. ಅವರಲ್ಲಿ ಯಾರು ಉದ್ಘಾಟಿಸುತ್ತಾರೆ ಎಂದು ನಾಳೆ ಹೇಳುತ್ತೇವೆ, ಎಂದು ಚಿತ್ರೋತ್ಸವ ಉದ್ಘಾಟನೆಯ ಎರಡು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಿ ಬಂದ ಉತ್ತರ!

ಭವಿಷ್ಯದ ಸೃಜನಶೀಲ ಮನಸ್ಸುಗಳು ಚಿತ್ರೋತ್ಸವದ ಹೊಸ ಭರವಸೆಯ ವಿಭಾಗ ಇದ್ದಂತಿದೆ. ಚಿತ್ರರಂಗದಲ್ಲಿ ಕೆಲಸ ಮಾಡಲು ಬಯಸುವ ಯುವ ಸಮೂಹಕ್ಕೆ ಒಂದು ರೀತಿಯ ಕಮ್ಮಟ ಇದು. ೩ ವರ್ಷಗಳ ಹಿಂದೆ ಆರಂಭವಾದ ಈ ವಿಭಾಗದ ನಾಲ್ಕನೇ ವರ್ಷವಿದು. ಇದು ಅಪಾರ ಬೇಡಿಕೆಯ ವಿಭಾಗ ಇದ್ದಂತಿದೆ. ಈ ಹಿಂದೆ ಪ್ರತಿ ವರ್ಷ ೭೫ ಮಂದಿಯಂತೆ ೨೨೫ ಮಂದಿ ಇಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿ ಕಾನ್ ಚಿತ್ರೋತ್ಸವದಲ್ಲಿ ತಾವು ನಿರ್ದೇಶಿಸಿದ ವಿದ್ಯಾರ್ಥಿ ಚಿತ್ರ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ನಿರ್ದೇಶಕ ಚಿದಾನಂದ ನಾಯ್ಕ ಅವರು ಇಲ್ಲಿ ನಿರ್ದೇಶನ ವಿಭಾಗದಲ್ಲಿ ತರಬೇತಿ ಪಡೆದಿದ್ದರು.

ನಿರ್ದೇಶನ, ಅಭಿನಯ, ಛಾಯಾಗ್ರಹಣ, ಸಂಕಲನ ಮತ್ತು ಉಪಶೀರ್ಷಿಕೆ, ಚಿತ್ರಕಥಾ ರಚನೆ, ಹಿನ್ನೆಲೆ ಗಾಯನ, ಸಂಗೀತ ಸಂಯೋಜನೆ, ಉಡುಪು ವಿನ್ಯಾಸ, ಕಲಾ ನಿರ್ದೇಶನ, ಎನಿಮೇಶನ್ – ದೃಶ್ಯಪರಿಣಾಮ, ಎಆರ್ – ವಿಆರ್, ಕೇಶವಿನ್ಯಾಸ ಮತ್ತು ಪ್ರಸಾಧನ, ಧ್ವನಿಮುದ್ರಣ ಮತ್ತು ಡಬ್ಬಿಂಗ್/ ವೋಯ್ಸ್ ಓವರ್ ಹೀಗೆ ೧೩ ವಿವಿಧ ವಿಭಾಗಗಳಲ್ಲಿ ತರಬೇತಿ ಬಯಸಿ ೧,೦೭೦ ಮಂದಿ ಈ ಬಾರಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ ನೂರು ಮಂದಿ ಆಯ್ಕೆಯಾಗಿದ್ದಾರೆ. ಆಯಾ ವಿಭಾಗಗಳ ತಜ್ಞರು ಅವರಿಗೆ ತರಬೇತಿ ನೀಡಲಿದ್ದಾರೆ. ನೂರು ಮಂದಿಯನ್ನು ತಲಾ ೨೦ ಮಂದಿಯ ೫ ತಂಡಗಳಾಗಿ ವಿಭಜಿಸಿ, ಅವರು ೪೮ ಗಂಟೆಗಳಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸುವ ಸ್ಪರ್ಧೆ ಇದೆ. ಫಿಲಂ ಬಜಾರ್ ಚಿತ್ರೋತ್ಸಾಹಿಗಳಿಗೆ, ವೃತ್ತಿಯಾಗಿ ಅದನ್ನು ತೆಗೆದುಕೊಳ್ಳ ಬಯಸುವವರಿಗೆ ಕಮ್ಮಟದಂತೆ ಇರುತ್ತದೆ. ವಿವಿಧ ಹಂತಗಳಲ್ಲಿ ವಿಶ್ವಖ್ಯಾತ ತಜ್ಞರ ಜೊತೆ ಸಮಾಲೋಚನೆ, ಚರ್ಚೆ ಇಲ್ಲಿ ಸಾಧ್ಯ. ತಿಥಿ, ಪೆದ್ರೋ ಸೇರಿದಂತೆ ಹಲವು ಕನ್ನಡ ಚಿತ್ರಗಳು ಇಲ್ಲಿ ಪಾಲ್ಗೊಂಡಿದ್ದವು.

ಈ ಬಾರಿ ವೀಕ್ಷಣಾ ಕೊಠಡಿಯಲ್ಲಿ ಕೆಲವು ಚಿತ್ರಗಳಿವೆ. ನರೇಶ್‌ಕುಮಾರ್ ಹೆಗ್ಡೆಯವರ ‘ದ ಲೈಟ್ ಫಾರ್ ದ ರೆಸ್ಟ್ ಆಫ್ ದ ವಾಕ್’, ಸತ್ಯತಾಥ್‌ರ ‘ಕಬಂಧ’, ಜ್ಯೋತಿಲಕ್ಷಿ ಅವರ ‘ಬಯಕೆಗಳು ಬೇರೂರಿದಾಗ’, ಸಾಗರ್ ಪುರಾಣಿಕರ ‘ವೆಂಕ್ಯಾ’, ತೃಪ್ತಿ ಕುಲಕರ್ಣಿ, ಮೇಘನಾ ಜಗನ್ನಾಥ್, ಚಿತ್ರಾ ಪರ ಮೇಶ್ವರನ್, ಪೂಜಿತಾ ಪ್ರಸಾದ್ ಈ ನಾಲ್ವರ ‘೪ ಬೈ ೪’, ಅಂಜು ಆಶಾ ಅನಂತ್ ರ ‘ನೂಲು’, ಅಜಯ್ ಗುರುನಾಥ್‌ರ ‘ಮಿರೇಜ್’ ಈ ಚಿತ್ರಗಳು.

ಫಿಲಂ ಬಜಾರ್ ಶಿಫಾರಸು ಮಾಡಿದ ಚಿತ್ರಗಳಲ್ಲಿ ಪಿನಾಕಿ ಜನಾರ್ಧನ್‌ರ ಕನ್ನಡ ‘ಹೌಸ್ ಆಫ್ ಮಣಿಕಂಠ’, ಹೈದರ್‌ಖಾನ್‌ರ ಹಿಂದಿ, ಕನ್ನಡ, ಗುಜರಾಥಿ ಚಿತ್ರ ‘ಲೈಫ್ ಬಿಯಾಂಡ್ ೬೦’ ಚಿತ್ರಗಳು, ರಘು ಆರವ್ ರ ಕಿರುಚಿತ್ರ ‘ಶಾಕಲ್ಸ್ ಬೈ ಸ್ಕೆ ’ ಇದೆ. ಜೊತೆಗೆ ಸಾರ್ಥಕ್ ಹೆಗ್ಡೆಯವರ ‘ಗ್ರೀನ್ ಪರ್ಲ್’ ಮತ್ತು ತೇಜೇಶ್ ಕಿರಣ್‌ರ ‘ಇಂಪರ್ಸನೇಶನ್’ ಚಿತ್ರಗಳಿವೆ.

 

Tags:
error: Content is protected !!