Mysore
20
broken clouds

Social Media

ಸೋಮವಾರ, 26 ಜನವರಿ 2026
Light
Dark

ಸರ್ಕಾರ, ರಾಜ್ಯಪಾಲರ ಸಂಘರ್ಷ ; ನ್ಯಾಯಾಂಗ ಮಧ್ಯಪ್ರವೇಶ ಅಗತ್ಯ

Stop Tug-of-War Over Leadership Debate; Focus on Development Instead

ಕಳೆದ ಗುರುವಾರ ಆರಂಭವಾದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಯಥಾವತ್ತು ಓದುವುದಕ್ಕೆ ರಾಜ್ಯಪಾಲರು ನಿರಾಕರಿಸಿದ್ದಲ್ಲದೆ, ತಾವೇ ಸಿದ್ಧಪಡಿಸಿದ್ದ ಮೂರು ಸಾಲಿನ ಭಾಷಣವನ್ನು ಓದುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇತ್ತೀಚೆಗೆ ತಮಿಳುನಾಡು, ಕೇರಳ ರಾಜ್ಯಪಾಲರೂ ಇದೇ ರೀತಿ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ ಎಂಬುದು ಗಮನಾರ್ಹ.

ಅಲ್ಲದೆ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೆಲ್ಲ ಇಂತಹ ಬೆಳವಣಿಗೆಗಳು ನಡೆಯುತ್ತಿರು ವುದು ಗಂಭೀರವಾಗಿ ಚಿಂತನೆ ಮಾಡ ಬೇಕಾದ ವಿಷಯ. ಸರ್ಕಾರ ಸಿದ್ದಪಡಿಸಿದ ಭಾಷಣ ಓದಲು ರಾಜ್ಯಪಾಲರು ನಿರಾ ಕರಿಸುವುದು ಅಥವಾ ಕೆಲವು ಪ್ಯಾರಾ ಗಳನ್ನು ಬಿಟ್ಟು ಓದುವುದು ಅಥವಾ ತಾವೇ ಬರೆದು ತಂದ ಭಾಷಣವನ್ನು ವಾಚಿಸುವಂತಹ ಸನ್ನಿವೇಶಗಳು ಪ್ರಜಾ ತಂತ್ರ ವ್ಯವಸ್ಥೆಗೆ ಆರೋಗ್ಯಕರವಲ್ಲ. ರಾಜ್ಯ ಪಾಲ ಥಾವರ್ ಚಂದ್ ಗೆಹೋಟ್ ಅವರು ರಾಜ್ಯ ಸರ್ಕಾರ ತಯಾರಿಸಿದ್ದ ಪೂರ್ಣ ಭಾಷಣ ವನ್ನು ಓದದೆ, ತಾವೇ ಸಿದ್ಧಪಡಿಸಿದ್ದ ಕ್ಲುಪ್ತ ಭಾಷಣವನ್ನು ಅಂದಾಜು ಒಂದೇ ನಿಮಿಷದಲ್ಲಿ ಓದಿ, ಸದನದಿಂದ ನಿರ್ಗಮಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ದಂತೆ ಸಚಿವರು, ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವರ್ತನೆ ಸಂವಿಧಾನದ ಗೌರವಕ್ಕೆ ಧಕ್ಕೆತಂದಿದೆ ಎಂದು ಆರೋಪಿ ಸಿದರೆ, ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಶಾಸಕರು ರಾಜ್ಯಪಾಲರಿಗೆ ಸರ್ಕಾರ ಅವಮಾನ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಆದರೆ, ರಾಜ್ಯಪಾಲರ ಹುದ್ದೆಗಿರುವ ಸಾಂವಿಧಾನಿಕ ಹೊಣೆಯನ್ನು ಗೆಲ್ಲೋಟ್ ನಿರ್ಲಕ್ಷಿಸಿದಂತಾಗಿದೆ.

ತಮಿಳುನಾಡಿನಲ್ಲಿ ರಾಜ್ಯಪಾಲರ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತಿರುವ ಆರ್. ಎನ್. ರವಿ ಅವರು ಕೂಡ ಇತ್ತೀಚೆಗೆ ಅಧಿವೇಶನದಲ್ಲಿ ಅಲ್ಲಿನ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದಲು ನಿರಾಕರಿಸಿದರು. ಕೇರಳದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಅಧಿವೇಶನದಲ್ಲಿ ಭಾಷಣದ ಕೆಲವು ಭಾಗಗಳನ್ನು ಕೈಬಿಟ್ಟು, ತಾವೇ ಸಿದ್ಧಪಡಿಸಿದ್ದ ಕೆಲ ಸಾಲುಗಳನ್ನು ಸೇರಿಸಿ ಓದಿದರು.

ಮಸೂದೆಗಳಿಗೆ ಅಂಕಿತ ಹಾಕುವುದು, ಕುಲಪತಿಗಳಂತಹ ಹುದ್ದೆಗಳಿಗೆ ನೇಮಕ ಮಾಡುವುದು ಮತ್ತು ಸಾಂಪ್ರದಾಯಿಕ ಭಾಷಣ ಮಾಡುವಂತಹ ವಿಷಯಗಳಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ವಿವಾದಕ್ಕೆ ಕಾರಣವಾಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಆತಂಕ ಎದುರಾಗಿದೆ. ಅಲ್ಲದೆ, ರಾಜ್ಯಪಾಲರು ಕೇಂದ್ರ ಸರ್ಕಾರದ ಸೂಚನೆ, ನಿರ್ದೇಶನಗಳ ಪಾಲನೆಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ನಾಡಿನ ಅಭಿವೃದ್ಧಿ ಯೋಜನೆಗಳು ಕುಂಠಿತಗೊಳ್ಳುತ್ತವೆ. ರಾಜ್ಯಪಾಲರು ತಮ್ಮದು ಸಾಂವಿಧಾನಿಕ ಹುದ್ದೆ ಎಂಬುದನು ಮರೆತು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದು, ಆ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದಂತಾಗುತ್ತದೆ.

ರಾಜ್ಯಪಾಲ ಗೆದ್ದೋಟ್ ಅವರು ಭಾಷಣ ಓದದಿರುವಮೂಲಕ ಸರ್ಕಾರ, ಜನಪ್ರತಿನಿಧಿಗಳ ಸಭೆಯ ಹಕ್ಕನ್ನೂ ಕಸಿದಿದ್ದಾರೆ. ರಾಜ್ಯ ಸರ್ಕಾರವು ಅಧಿವೇಶ ನಕ್ಕಾಗಿ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಯಥಾವತ್ತಾಗಿ ಓದಲೇ ಬೇಕು ಎಂಬುದು ಸಂವಿಧಾನ ತಜ್ಞರ ಅಭಿಪ್ರಾಯವಾಗಿದೆ.

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವನ್ನು ಟೀಕಿಸುವುದು ಸಹಜ. ಆದರೆ ಚುನಾ ಯಿತ ಸರ್ಕಾರದ ನಡೆಯನ್ನು ವಿರೋಧಿ ಸಲು ಅಥವಾ ತಿರಸ್ಕರಿಸಲು ರಾಜ್ಯಪಾಲ ರಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರದತ್ತವಾದ ಅಧಿಕಾರ ಇಲ್ಲ. ಅದೇ ರೀತಿ ಸಾಂವಿಧಾನಿಕ ಹುದ್ದೆಯಲ್ಲಿರುವವರು ಸದನಕ ಬಂದಾಗ ಅವರೊಂದಿಗೆ ಗೌರವದಿಂದ ವರ್ತಿಸುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯ. ಹಾಗಾಗಿ ರಾಜ್ಯಪಾಲರ ದಾರಿಗೆ ಅಡ್ಡಬಂದ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರ ವರ್ತನೆಯೂ ಶೋಭೆಯಲ್ಲ.

ರಾಜ್ಯಪಾಲರೇ ಸಂವಿಧಾನದ ನಿಯ ಮಾವಳಿಯನ್ನು ಉಲ್ಲಂಘಿಸಿರುವುದು ಸಮರ್ಥನೀಯವಲ್ಲ. ಆದರೆ, ರಾಷ್ಟ್ರಪತಿ ಗಳೇ ವಿಬಿ ಜಿ ರಾಮ್ ಜಿ (ಗ್ರಾಮೀಣ್) ಗೆ ಅಂಕಿತ ಹಾಕಿರುವಾಗ, ಆ ಕಾಯ್ದೆ ವಿರುದ್ಧ ರಾಜ್ಯಪಾಲರು ಮಾತನಾಡು ವುದು ಹೇಗೆ? ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸುವ ವೇಳೆ ಈ ಅಂಶ ವನ್ನು ಮುನ್ನೆಲೆಗೆ ತರಬಹುದಿತ್ತು ಎಂಬ ವಾದವೂ ಇದೆ. ಇಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡೆಯಲ್ಲಿ ರಾಜಕಾರಣ ಎದ್ದುಕಾಣುತ್ತದೆ. ಇದರಿಂದ ಸಂವಿಧಾ ನದ ಮೌಲ್ಯಗಳು ಕುಸಿಯುತ್ತಾ ಹೋಗು ತ್ತವೆ.

ಒಂದು ಕಡೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷ, ಇನ್ನೊಂದು ಕಡೆ ಈ ಸಮರಕ್ಕೆ ಲೋಕ ಭವನವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿರುವುದು ಗೋಚರಿ ಸುತ್ತಿದೆ. ತಮಿಳುನಾಡು, ಕೇರಳ ರಾಜ್ಯ ಗಳಲ್ಲೂ ಇಂತಹದ್ದೇ ಬೆಳವಣಿಗೆಗಳು ನಡೆದಿವೆ. ನಾವೇ ಒಪ್ಪಿಕೊಂಡಿರುವ ಸಂವಿಧಾವನ್ನು ನಾವೇ ಉಲ್ಲಘಿಂಸು ವುದರಿಂದ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಜನರಲ್ಲಿರುವ ನಂಬಿಕೆ ಕುಸಿಯುತ್ತದೆ. ನ್ಯಾಯಾಂಗ ಮಧ್ಯ ಪ್ರವೇಶ ಮಾಡಿ ಈ ಸಾಂವಿಧಾನಿಕ ಬಿಕ್ಕಟ್ಟಿಗೆ ತೆರೆ ಎಳೆಯ ಬೇಕು.

 

Tags:
error: Content is protected !!