ಈಗ ಎಲ್ಲೆಡೆ ಕೊರೆಯುವ ಚಳಿ ಆವರಿಸಿದ್ದು, ದೇವಸ್ಥಾನ, ಬಸ್ ನಿಲ್ದಾಣ, ರಸ್ತೆಬದಿ ಹಾಗೂ ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯ ಪಡೆದಿರುವ ನಿರ್ಗತಿಕರು ತೀರ ಸಂಕಷ್ಟ ಅನುಭವಿಸುವಂತಾಗಿದೆ.
ಉಳ್ಳವರು ಚಳಿಗಾಲದಲ್ಲಿ ಬೆಚ್ಚನೆಯ ಉಡುವು ಧರಿಸಿ, ಬಿಸಿಯಾದ ಆಹಾರ ಸೇವನೆ ಮಾಡುತ್ತಾ ಚಳಿಯಿಂದ ರಕ್ಷಣೆ ಪಡೆಯುತ್ತಾರ, ಅದರ ನಿರ್ಗತಿಕರು ಏನು ಮಾಡಬೇಕು? ಇಂತಹವರ ಸಹಾಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು.
ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು. ಕನಿಷ್ಠಪಕ್ಷ ನಿರ್ಗತಿಕರಿಗೆ ಒಂದು ಹೊದಿಕೆ ಮತ್ತು ಅವರಿಗೆ ಬಿಸಿಯಾದ ಗುಣಮಟ್ಟದ ಆಹಾರ ಪೂರೈಕೆ ಮಾಡಲು ಕ್ರಮವಹಿಸಬೇಕು. ಸರ್ಕಾರದೊಂದಿಗೆ ಸ್ವಯಂ ಸೇವಾ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಚಳಿಗಾಲದಲ್ಲಿ ನಿರ್ಗತಿಕರಿಗೆ ಆಶ್ರಯವನ್ನೂ ದೊರಕಿಸಿ ಕೊಡಬಹುದು.
-ಬಿ.ಗಣೇಶ, ಜಿ.ಟಿ.ತೊಪ್ಪಲು, ಮೈಸೂರು



