Mysore
23
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಓದುಗರ ಪತ್ರ| ಕನ್ನಡದಲ್ಲಿ ಶಬ್ದಗಳಿರಲಿಲ್ಲವೇ?

dgp murder case

ಜ್ಞಾನ, ಆರೋಗ್ಯ ಮತ್ತು ಸಂಶೋಧನೆಗಾಗಿ ಇರುವ ಯೋಜನೆ ‘ಕ್ವಿನ್ ಸಿಟಿ’ (knowledge, ellbeing and innovation kwin city)ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾಬಸ್ ಪೇಟೆಯಲ್ಲಿ ಚಾಲನೆ ನೀಡಿದ್ದಾರೆ.

ಇದೊಂದು ಮಹತ್ವಾಕಾಂಕ್ಷೆಯ ಯೋಜನೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಪ್ರತಿಬಾರಿಯೂ ತಮ್ಮ ಆಡಳಿತದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಇಂಥ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಕನ್ನಡದ ಹೆಸರುಗಳನ್ನಿಡುವ ಬದಲು ಆಂಗ್ಲ ಭಾಷೆಯ ಹೆಸರಿಟ್ಟಿರುವುದು ತೀರಾ ಆಶ್ಚರ್ಯ. ಇಂಗ್ಲಿಷ್ ಹೆಸರಿನ ವ್ಯಾಮೋಹವನ್ನು ಬಿಟ್ಟು ಕನ್ನಡದಲ್ಲಿಯೇ ಸರಳವಾಗಿ ‘ಜ್ಞಾನ ನಗರಿ’ ಎಂದು ಹೆಸರಿಡಬಹುದಿತ್ತಲ್ಲವೇ? ಸರ್ಕಾರಕ್ಕೆ ‘ಕನ್ನಡ ಬದ್ಧತೆ’ ಇರುವುದು ಕೇವಲ ವೇದಿಕೆಗಳ ಮೇಲೆ ಮಾತ್ರವೇ? ಮುಖ್ಯಮಂತ್ರಿಗಳಿಗೆ ಕನ್ನಡದ ಮೇಲಿನ ಪ್ರೀತಿ ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗಿದೆಯೇ ವಿನಾ ಆಡಳಿತದಲ್ಲಿಲ್ಲ ಅನಿಸುತ್ತದೆ.

-ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು

 

Tags:
error: Content is protected !!