Mysore
24
haze

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಓದುಗರ ಪತ್ರ: ದಸಂಸ ಹೋರಾಟಕ್ಕೆ ಸಂದ ಜಯ

ಶಿಲಾನ್ಯಾಸ ನೆರವೇರಿಸಿದ 17 ವರ್ಷಗಳ ನಂತರ ಮೈಸೂರು ನಗರದ ಹೃದಯ ಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದ ಪೂರ್ಣ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿರುವುದು ಖುಷಿಯ ಸಂಗತಿ.

ಅಂಬೇಡ್ಕರ್ ಭವನದ ಕಾಮಗಾರಿ ವಿಳಂಬದ ಬಗ್ಗೆ ಮೈಸೂರಿನ ಬೆಟ್ಟಯ್ಯ ಕೋಟೆ ಬಣದ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸದಿದ್ದರೆ, ಹಲವಾರು ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ
ಹೇರದಿದ್ದರೆ ಈಗಲೂ ಆಡಳಿತಾತ್ಮಕ ಅನುಮೋದನೆ ದೊರೆಯುವುದು ಕಷ್ಟವಾಗುತ್ತಿತ್ತು.

ಕೊನೆಗೂ ಆಡಳಿತಾತ್ಮಕ ಅನುಮೋದನೆ ದೊರಕಲು ಕಾರಣಕರ್ತರಾದ ದಸಂಸ ಸಂಘಟನೆಯ ಕಾರ್ಯಕರ್ತರು, ಮುತುವರ್ಜಿ ವಹಿಸಿ ಸರ್ಕಾರದ ಮೇಲೆ ಒತ್ತಡ ಹಾಕಿದ ಸಾಮಾನ್ಯ ಜನತೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್. ಸಿ. ಮಹದೇವಪ್ಪ ಅವರು ಅಭಿನಂದನಾರ್ಹರು.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.

 

Tags:
error: Content is protected !!