ಕೇರಳದ ವೈಕಂನಲ್ಲಿ ಅಸ್ಪೃಶ್ಯತೆ ಆಚರಣೆಯ ವಿರುದ್ಧ ನಡೆದ ಹೋರಾಟದ ನೆನಪಿನಾರ್ಥ ತಮಿಳುನಾಡು ಸರ್ಕಾರ ಕೊಡಮಾಡುವ ೨೦೨೪ನೇ ಸಾಲಿನ ‘ವೈಕಂ ಪ್ರಶಸ್ತಿ’ಯು ಕರ್ನಾಟಕದ ಹೆಸರಾಂತ ಸಾಹಿತಿ, ತಳಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿ ರುವ ದೇವನೂರ ಮಹಾದೇವರವರಿಗೆ ಲಭಿಸಿ ರುವುದು ಹೆಮ್ಮೆಯ ವಿಚಾರ.
ಕೇರಳದ ವೈಕಂನಲ್ಲಿ ಪೆರಿಯಾರ್‌ರವರ ನೇತೃತ್ವದಲ್ಲಿ ಅಸ್ಪೃಶ್ಯತೆ ಆಚರಣೆಯ ವಿರುದ್ಧ ನಡೆದ ವೈಕಂ ಸತ್ಯಾಗ್ರಹ ನೂರು ವರ್ಷಗಳನ್ನು ಪೂರೈಸಿದ ನೆನಪಿನಾರ್ಥ ಈ ಪ್ರಶಸ್ತಿಯನ್ನು ತಮಿಳುನಾಡು ಸರ್ಕಾರ ನೀಡಿದೆ.
ಅಂದು ಯಾವ ದೇವಸ್ಥಾನದ ಪ್ರವೇಶಕ್ಕಾಗಿ ವೈಕಂನಲ್ಲಿ ಹೋರಾಟ ನಡೆದಿತ್ತೋ ಅದೇ ದೇವಸ್ಥಾನದ ಪಕ್ಕದಲ್ಲಿ ಇಂದು ವೈಕಂ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರುವುದು ಹೆಮ್ಮೆಯ ವಿಚಾರ. ಇದು ದಮನಿತ ವರ್ಗಗಳ ಕಲ್ಯಾಣಕ್ಕಾಗಿ ದುಡಿಯುವವರನ್ನು ಗುರುತಿಸಿ ಅವರಿಗೆ ನೀಡುವ ಪ್ರಶಸ್ತಿಯಾ ಗಿದ್ದು, ಕರ್ನಾಟಕದ ಹಿರಿಯ ಸಾಹಿತಿ ದೇವನೂರ ಮಹಾದೇವರವರು ಭಾಜನರಾಗಿರುವುದು ಮೂರೂ ರಾಜ್ಯಗಳನ್ನು ಒಗ್ಗೂಡಿಸಿದಂತಾಗಿದೆ. -ಪಿ. ಸಿ. ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.





