ಶಿವಮೊಗ್ಗದಿಂದ ಮೈಸೂರಿಗೆ ಪ್ರತಿನಿತ್ಯ ಸಂಚರಿಸುವ ಮೈಸೂರು ಇಂಟರ್ ಸಿಟಿ ಎಕ್ಸ್‌ಪ್ರೆಸ್ (೧೬೨೦೫)ರೈಲು ಪ್ರತಿನಿತ್ಯ ಸಂಜೆ ೪. ೫೦ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ ೧೦. ೩೦ಕ್ಕೆ ಮೈಸೂರು ತಲುಪುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಮತ್ತಿತರ ಕಾರಣಗಳಿಂದಾಗಿ ರೈಲು ರಾತ್ರಿ ಮೈಸೂರು ತಲುಪುವುದು ೧ ಗಂಟೆಯಾಗುತ್ತಿದೆ.
ಈ ಮೊದಲು ಸಂಜೆ ೪ ಗಂಟೆಗೆ ಶಿವಮೊಗ್ಗ ನಿಲ್ದಾಣ ಬಿಡುತ್ತಿದ್ದ ರೈಲು ರಾತ್ರಿ ೧೦ ಗಂಟೆ ಯೊಳಗೆ ಮೈಸೂರನ್ನು ತಲುಪುತ್ತಿತ್ತು. ಆದರೆ ಸಮಯವನ್ನು ಸಂಜೆ ೪. ೪೫ಕ್ಕೆ ಬದಲಾಯಿಸಿದ ನಂತರ ಒಂದಿಲ್ಲೊಂದು ಸಮಸ್ಯೆಯಿಂದಾಗಿ ರೈಲು ಮೈಸೂರು ತಲುಪುವುದು ತಡವಾಗುತ್ತಿರುವುದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಸಂಸದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಕಾಲಕ್ಕೆ ರೈಲು ಮೈಸೂರು ತಲುಪಲು ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ. -ವಾರುಣಿ, ಮೈಸೂರು





