ರಸ್ತೆ ಅಭಿವೃದ್ಧಿಯ ನೆಪದಲ್ಲಿ ಮೈಸೂರಿನ ಹೈದರಾಲಿ ರಸ್ತೆಯಲ್ಲಿದ್ದ ೪೦ ಕ್ಕೂ ಹೆಚ್ಚು ಮರಗಳನ್ನು ರಾತ್ರೋರಾತ್ರಿ ಕಡಿದುರುಳಿಸಿದ್ದು, ಪರಿಸರ ಪ್ರಿಯರಿಗೆ ಬೇಸರ ತರಿಸಿದೆ.
ಈ ಮಾರ್ಗದಲ್ಲಿ ಸಂಚರಿಸುವಾಗ ಹಸಿರಿನ ಸಿರಿಯನ್ನು ಕಣ್ತುಂಬಿಕೊಳ್ಳುತ್ತಿದ್ದವರಿಗೆ ಮುಂಜಾನೆಯೇ ಆಘಾತ ಕಾದಿತ್ತು. ಏಕೆಂದರೆ ೪೦ಕ್ಕೂ ಹೆಚ್ಚು ಮರಗಳನ್ನು ಗುತ್ತಿಗೆ ಪಡೆದಿದ್ದವರು ಕಡಿದುರುಳಿಸಿದ್ದರು.
ಚಿಕ್ಕಂದಿನಿಂದಲೂ ಈ ಮರಗಳ ನೆರಳಿನಲ್ಲಿ ಆಡಿ ಬೆಳೆದಿದ್ದವರು ಬೆಳಗಾಗುವುದರೊಳಗೆ ಮರಗಳನ್ನು ಧರೆಗುರುಳಿಸಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ರಸ್ತೆ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಸಂಬಂಧಪಟ್ಟವರು ಮರಗಳನ್ನು ಉಳಿಸಿಕೊಂಡು ಪರ್ಯಾಯ ಮಾರ್ಗಗಳನ್ನು ಕಂಡು ಕೊಳ್ಳುವುದು ಅಗತ್ಯ.
ನಗರ ಪಾಲಿಕೆಯವರು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದಿರುವುದು ನೋವಿನ ಸಂಗತಿಯಾಗಿದೆ. – ಪಿ. ಸಿ. ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು





