ಹಣದುಬ್ಬರದಿಂದ ಬೇಸತ್ತ ದುಡಿಯುವ ವರ್ಗ ವೇತನ ಹೆಚ್ಚಿಸುವಂತೆ ಮನವಿ ಮಾಡಿದಾಗ ನಿರಾಕರಿಸುವ ಸರ್ಕಾರ ಈಗ ಏಕಾಏಕಿ ಜನಪ್ರತಿನಿಧಿಗಳ ಸಂಬಳವನ್ನು ಶೇ. ೫೦ರಷ್ಟು ಹೆಚ್ಚಿಸಲು ಮುಂದಾಗಿರುವುದು ದಿಗ್ಭ್ರಮೆ ಮೂಡಿಸಿದೆ.
ಸರ್ಕಾರ ಜನಪ್ರತಿನಿಧಿಗಳ ಸಂಬಳವನ್ನು ಶೇ. ೧೦ರಿಂದ ಶೇ. ೧೫ರಷ್ಟು ಏರಿಕೆ ಮಾಡಿದ್ದರೆ ಕಾಲಾನುಸಾರ ಏರಿಕೆ ಮಾಡುತ್ತಿದ್ದೇವೆ ಎಂದು ಜನರ ಆಕ್ರೋಶಕ್ಕೂ ಸಮಜಾಯಿಸಿ ನೀಡಬಹುದಿತ್ತು. ಆದರೆ ಸರ್ಕಾರ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿದ ಮಾದರಿಯಲ್ಲೇ ಶೇ. ೫೦ರಷ್ಟು ಏರಿಕೆ ಮಾಡಿ ಎಂದು ಕೇಳಿರುವುದು ಯಾವ ಮಾನದಂಡದಿಂದಲೂ ಒಪ್ಪಲಾಗದು. ವಿಪರ್ಯಾಸವೆಂದರೆ ಆಡಳಿತ ಪಕ್ಷದ ಪ್ರತಿಯೊಂದು ನಿಲುವು ಮತ್ತು ನಿರ್ಧಾರಗಳನ್ನು ವಿರೋಧಿಸುವ ವಿಪಕ್ಷಗಳೂ ಈ ಏರಿಕೆಯ ಪ್ರಸ್ತಾವನೆಯನ್ನು ವಿರೋಧಿಸದೆ ಸಹಮತ ನೀಡಿರುವುದು ವಿಪರ್ಯಾಸವೇ ಸರಿ. -ದಯಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು





