ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ರೇಣುಕಾ ಪೂಜಾರಿ ಎಂಬವರು ಈ ಗೌರವಕ್ಕೆ ಪಾತ್ರರಾಗಿದ್ದು, ಅವರು ಕನ್ನಡ ಸ್ನಾತಕೋತ್ತರ ಪದವಿ ಪಡೆದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿಯೇ ಸಹಾಯಕ ಪ್ರಾಧ್ಯಾಪಕಿಯಾಗಿ ನೇಮಕ ಗೊಂಡಿರುವುದು ನಿಜಕ್ಕೂ ಶ್ಲಾಘನೀಯ.
ತೃತೀಯ ಲಿಂಗಿಗಳು ಎಂದರೆ ಸಮಾಜದಲ್ಲಿ ಬೇರೆಯದ್ದೇ ಅಭಿಪ್ರಾಯವಿದೆ. ಅವರು ಕೆಲಸ ಮಾಡುವುದಿಲ್ಲ, ಸಾರ್ವಜನಿಕರ ಬಳಿ ಹಣ ವಸೂಲಿ ಮಾಡುತ್ತಾರೆ ಎಂಬ ಭಾವನೆ ಇದೆ. ಇಂತಹ ಅಭಿಪ್ರಾಯಗಳನ್ನು ಸುಳ್ಳಾಗಿಸಿ ಅವಕಾಶ ಸಿಕ್ಕರೆ ತೃತೀಯ ಲಿಂಗಿಗಳೂ ಸಾಧನೆ ಮಾಡುತ್ತಾರೆ ಎಂಬುದನ್ನು ರೇಣುಕಾ ಪೂಜಾರಿ ಸಾಬೀತುಪಡಿಸಿ ದ್ದಾರೆ. ತೃತೀಯ ಲಿಂಗಿಗಳನ್ನೂ ಸಮಾಜದಲ್ಲಿ ಮುಖ್ಯವಾಹಿನಿಗೆ ತರಲು ಸ್ವಯಂ ಸೇವಾ ಸಂಘ-ಸಂಸ್ಥೆಗಳು ಹಾಗೂ ಸರ್ಕಾರ ಶ್ರಮಿಸಬೇಕಿದೆ. ಶ್ರಮಪಟ್ಟರೆ ಏನನ್ನಾದರೂ ಸಾಽಸಬಹುದು ಎಂಬುದಕ್ಕೆ ರೇಣುಕಾ ಪೂಜಾರಿ ಸಾಕ್ಷಿಯಾಗಿದ್ದು, ಅವರನ್ನು ಆದರ್ಶವಾಗಿಟ್ಟುಕೊಂಡು ಇತರರೂ ಸಾಧನೆಯ ಹಾದಿ ಹಿಡಿಯಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.