ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹಳಷ್ಟು ಸ್ಥಳೀಯ ಲೇಖಕರು ಹಾಗೂ ಸಾಹಿತಿಗಳನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ.
ಸಮ್ಮೇಳನಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲೆಯ ಲೇಖಕರು ಹಾಗೂ ಸಾಹಿತಿಗಳನ್ನು ಒಗ್ಗೂಡಿಸಿ ಸಲಹಾ ಸಮಿತಿ ಸಭೆಯನ್ನು ನಡೆಸಲಾಯಿತು. ಆ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದವರ ಸಹಿ ಹಾಗೂ ಸಂಪೂರ್ಣ ವಿಳಾಸಗಳನ್ನು ಸಂಗ್ರಹಿಸಲಾಗಿತ್ತು. ಸಮ್ಮೇಳನಕ್ಕೆ ಆಹ್ವಾನಿಸದ ಮೇಲೆ ಅವರೊಂದಿಗೆ ಸಭೆ ನಡೆಸಿದ ಉದ್ದೇಶವಾದರೂ ಏನು? ಕೋಟ್ಯಂತರ ರೂ. ವ್ಯಯಿಸಿ ಸಮ್ಮೇಳನ ಮಾಡಿ, ಸ್ಥಳೀಯ ಸಾಹಿತಿ ಹಾಗೂ ಲೇಖಕರಿಗೆ ಆಹ್ವಾನ ನೀಡಿಲ್ಲ ಎಂದಾದರೆ ಸಮ್ಮೇಳನ ಅಪೂರ್ಣ ಎಂದರ್ಥ. ಕಾರ್ಯಕ್ರಮದಲ್ಲಿ ಕೆಲ ಆಯ್ದ ಸಾಹಿತಿಗಳಿಗೆ ಮಾತ್ರ ಆಹ್ವಾನ ನೀಡಿದ್ದು, ಇತರೆ ಸಾಹಿತಿಗಳಿಗೆ ಬೇಸರ ತಂದಿದೆ. -ಸಿ. ಸಿದ್ದರಾಜು, ಆಲಕೆರೆ, ಮಂಡ್ಯ