Mysore
20
scattered clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಓದುಗರ ಪತ್ರ | ಮಾಧ್ಯಮಗಳ ನಡೆ ಪ್ರಶಂಸನೀಯ

ಶಸ್ತ್ರಚಿಕಿತ್ಸೆಗೆಂದು ಅಮೆರಿಕದ ಫ್ಲೋರಿಡಾ ಆಸ್ಪತ್ರೆಗೆ ತೆರಳಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಶಿವರಾಜ್‌ಕುಮಾರ್‌ರವರು ಶಸಚಿಕಿತ್ಸೆಯ ನಂತರ ಆರೋಗ್ಯವಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಶಿವರಾಜ್ ಕುಮಾರ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅಭಿಮಾನಿಗಳಿಗೆ ಆತಂಕ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರು ಸುದ್ದಿಯನ್ನು ವೈಭವೀಕರಿಸದೆ ತೀರಾ ಸೂಕ್ಷ ವಾಗಿ ಸುದ್ದಿ ಪ್ರಸಾರ ಮಾಡಿದ್ದು, ಜವಾಬ್ದಾರಿಯುತವಾಗಿ ವರ್ತಿಸಿರುವುದು ಉತ್ತಮ ಬೆಳವಣಿಗೆ. ಈ ಬಗ್ಗೆ ಸ್ವತಃ ಶಿವರಾಜ್ ಕುಮಾರ್‌ರವರೂ ಸಮಾಧಾನ ವ್ಯಕ್ತಪಡಿಸಿದ್ದಾರೆ. ಮನುಷ್ಯ ಅಂದ ಮೇಲೆ ಕಾಯಿಲೆ ಬರುವುದು ಸಹಜ. ಮಾಧ್ಯಮ ಅದನ್ನೇ ದೊಡ್ಡ ಸುದ್ದಿಯನ್ನಾಗಿಸಿಕೊಂಡು ಪ್ರಚಾರ ತೆಗೆದುಕೊಳ್ಳುವುದು ಇತ್ತೀಚೆಗೆ ಮಾಮೂಲಿ ಎನ್ನುವಂತಾಗಿದೆ. ಕೆಲವು ತಿಂಗಳ ಹಿಂದೆ ನಿಧನರಾದ ಕನ್ನಡದ ಸುಪ್ರಸಿದ್ಧ ನಿರೂಪಕಿ ಹಾಗೂ ನಟಿ ಅಪರ್ಣಾ ಕೂಡ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿದ್ದರೂ ಅದರ ಬಗ್ಗೆ ಜನರಿಗೆ ಗೊತ್ತಿರಲಿಲ್ಲ. ಕೆಲವು ಸೂಕ್ಷ ಆರೋಗ್ಯ ಸಮಸ್ಯೆಗಳು ಬಹಿರಂಗಗೊಂಡರೆ ಆ ವ್ಯಕ್ತಿಗಳಿಗೆ ಮಾನಸಿಕವಾಗಿ ಕಿರಿಕಿರಿಯಾಗುತ್ತದೆ. ಈ ವಿಚಾರದಲ್ಲಿ ಮಾಧ್ಯಮದವರು ನಡೆದುಕೊಂಡ ರೀತಿ ಮೆಚ್ಚುವಂತದ್ದು. ಕನ್ನಡಿಗರ ನೆಚ್ಚಿನ ಶಿವಣ್ಣ ಆದಷ್ಟು ಬೇಗ ಚೇತರಿಸಿಕೊಂಡು ಸ್ವದೇಶಕ್ಕೆ ಮರಳುವಂತಾಗಲಿ.
-ಕೆ. ವಿ. ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು.

Tags: