Mysore
18
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಓದುಗರ ಪತ್ರ | ಶಾಸಕರ ನಡೆ ಆದರ್ಶಪ್ರಾಯವಾಗಿರಲಿ

ಉತ್ತರ ಪ್ರದೇಶ ವಿಧಾನಸಭೆಯ ಮುಖ್ಯ ಸಭಾಂಗಣದ ಪ್ರವೇಶದ್ವಾರದ ಕಾರ್ಪೆಟ್ ಮೇಲೆ ಶಾಸಕರೊಬ್ಬರು ಪಾನ್ ಮಸಾಲ ಉಗುಳಿದ್ದಕ್ಕೆ ಸಭಾಧ್ಯಕ್ಷ ಸತೀಶ್ ಮಹಾನಾ ಆಕ್ಷೇಪ ವ್ಯಕ್ತಪಡಿಸಿ, ಸದನದ ಘನತೆಯನ್ನು ಪ್ರತಿಯೊಬ್ಬ ಸದಸ್ಯರೂ ಕಾಪಾಡಿಕೊಳ್ಳಬೇಕೆಂದು ಶಿಸ್ತಿನ ಪಾಠ ಬೋಽಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

‘ವಿಧಾನಸಭೆಯ ಸಭಾಂಗಣದ ಮುಂದೆ ಪಾನ್ ಮಸಲಾ ಉಗಿದ ಸದಸ್ಯ ಯಾರೆಂದು ನನಗೆ ತಿಳಿದಿದೆ. ಆ ವಿಡಿಯೋ ಕೂಡ ಲಭ್ಯವಿದೆ. ಆದರೆ ನಾನು ಯಾರನ್ನೂ ಅವಮಾನಿಸುವ ಉದ್ದೇಶ ಹೊಂದಿಲ್ಲವಾದ್ದರಿಂದ ಸಾರ್ವಜನಿಕವಾಗಿ ಅವರ ಹೆಸರು ಹೇಳಲು ಬಯಸುವುದಿಲ್ಲ. ಹಾಗೆ ಮಾಡಿದ ಸದಸ್ಯರು ನನ್ನನ್ನು ಭೇಟಿಯಾಗಬೇಕು, ಇಲ್ಲದಿದ್ದರೆ ನಾನು ಅವರನ್ನು ಕರೆಸುವಂತೆ ಒತ್ತಾಯಿಸಲಾಗುತ್ತದೆ’ ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರಾದವರು ಜವಾಬ್ದಾರಿಯುತವಾಗಿ ವರ್ತಿಸಬೇಕು.

ತಮ್ಮ ಕ್ಷೇತ್ರದ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ ಅವರೇ ಪವಿತ್ರವಾದ ವಿಧಾನಸೌದದ ಮುಂದೆ ಪಾನ್ ಮಸಾಲವನ್ನು ಜಗಿದು ಎಲ್ಲೆಂದರಲ್ಲಿ ಉಗಿಯುವುದು ಅವರಿಗೆ ಶೋಭೆ ತರುವುದಿಲ್ಲ. ಇದಿಷ್ಟೇ ಅಲ್ಲದೆ, ಕೆಲ ಸದಸ್ಯರು ಸದನದಲ್ಲಿಯೇ ಕೈ ಕೈ ಮಿಲಾಯಿಸುವುದು, ಬಟ್ಟೆ ಹರಿದುಕೊಂಡು ರಂಪಾಟ ಮಾಡುವುದು, ಗಲಾಟೆಗಳನ್ನು ನಿಯಂತ್ರಿಸಲು ಬರುವ ಮಾರ್ಷಲ್‌ಗಳ ಮೇಲೆಯೇ ಕೈ ಎತ್ತುವುದು, ಸದನದಲ್ಲಿ ಹಾಳೆಗಳನ್ನು ಹರಿದು ಬಿಸಾಡುವುದು, ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವುದು, ಇಷ್ಟು ಸಾಲದೆಂಬಂತೆ ಗಹನ ಚರ್ಚೆಗಳು ಸದನದಲ್ಲಿ ನಡೆಯುತ್ತಿರುವ ಸಮಯದಲ್ಲಿಯೇ ನಿದ್ದೆಗೆ ಜಾರಿ ಬಿಡುವುದು. . . ಈ ರೀತಿಯ ಶಾಸಕರ ಹಲವು ಬೇಜವ್ದಾರಿಯ ನಡವಳಿಕೆಗಳು ಸುದ್ದಿಯಾಗುತ್ತಿವೆ. ಜನರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದು ನಂಬಿ ಅವರನ್ನು ಆರಿಸಿ ಆ ಸ್ಥಾನದಲ್ಲಿ ಕೂರಿಸಿದ್ದಾರೆ. ಇದನ್ನು ಅರಿತು ಎಲ್ಲ ಶಾಸಕರು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿಭಾಯಿಸುವಂತಾಗಲಿ. -ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

Tags:
error: Content is protected !!