Mysore
25
overcast clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಓದುಗರ ಪತ್ರ| ಗೋಧಿ ಸುಟ್ಟವರಿಗೆ ಶಿಕ್ಷೆಯಾಗಲಿ

ಓದುಗರ ಪತ್ರ

ಎಚ್. ಡಿ. ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಮತ್ತು ಅಡುಗೆ ಸಿಬ್ಬಂದಿ ಸೇರಿ ೩-೪ ಗೋಧಿ ಮೂಟೆಗಳನ್ನು ಸುಟ್ಟು ಹಾಕಿರುವುದಾಗಿ ‘ಆಂದೋಲನ’ ದಿನ ಪತ್ರಿಕೆಯಲ್ಲಿ ವರದಿಯಾಗಿದೆ.

ಇದು ನಿಜಕ್ಕೂ ಹೇಯ ಕೃತ್ಯ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಹಸಿದು ಪಾಠ ಕೇಳಬಾರದು ಎಂದು ಸರ್ಕಾರ ಬಿಸಿಯೂಟ ಯೋಜನೆಯಡಿ ಮಧ್ಯಾಹ್ನದ ವೇಳೆ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಕೋಟ್ಯಂತರ ರೂ. ವ್ಯಯಿಸಿ ಎಲ್ಲ ಶಾಲೆಗಳಿಗೂ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿದೆ. ಆದರೆ ಅಂತರಸಂತೆ ಶಾಲೆಯಲ್ಲಿ ಪೂರೈಕೆಯಾಗಿದ್ದ ಗೋಧಿಯನ್ನು ಅಡುಗೆ ಸಿಬ್ಬಂದಿ ಹಾಗೂ ಮುಖ್ಯೋಪಾ ಧ್ಯಾಯರು ಬಳಸದೆ ಗೋಽಯಲ್ಲಿ ಹುಳು ಬಂದಿದೆ. ಮೂಟೆಗಳನ್ನು ಶಾಲಾ ಆವರಣದಲ್ಲಿಯೇ ಸುಟ್ಟು ಹಾಕಿದ್ದಾರೆ. ಬಡ ಮಕ್ಕಳ ಹೊಟ್ಟೆ ತುಂಬಿಸಬೇಕಾದ ಆಹಾರ ಪದಾರ್ಥವನ್ನು ಸುಟ್ಟು ಹಾಕಿರುವುದು ಎಷ್ಟು ಸರಿ.

ಈ ಘಟನೆ ನಡೆದು ೧೦ ದಿನಗಳ ಮೇಲಾಗಿದ್ದು, ಈ ವಿಚಾರದ ಬಗ್ಗೆ ಗೊತ್ತಿದ್ದರೂ ಸಿಆರ್‌ಪಿಯಾಗಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಯಾವುದೇ ಕ್ರಮತೆಗೆದುಕೊಳ್ಳದಿರುವುದು ಅನುಮಾನಗಳಿಗೆ ಕಾರಣ ವಾಗಿದೆ. ಆದ್ದರಿಂದ ಕೂಡಲೇ ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.
-ವಿನೋದ್ ಕುಮಾರ್, ಎಚ್. ಡಿ. ಕೋಟೆ ತಾ.

Tags:
error: Content is protected !!