ಕಳೆದ ವಾರ ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ, ಸರ್ಕಲ್ ಬಳಿ ಇರುವ ಸಿಗ್ನಲ್ ಲೈಟ್‌ಗಳು, ರಾತ್ರಿ ೮ ಗಂಟೆಯ ಸುಮಾರಿಗೆ ಮಳೆ ಬಂದಾಗಲೂ ಕಾರ್ಯನಿರ್ವಹಿಸುತ್ತಿದ್ದವು! ಇದರಿಂದಾಗಿ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು, ಹಸಿರು ಸಿಗ್ನಲ್ ಬರುವ ತನಕ ಸುರಿಯುವ ಮಳೆಯಲ್ಲಿಯೇ ನಿಲ್ಲುವುದು ಅನಿವಾರ್ಯವಾಗಿತ್ತು. ಇದು ಮೈಸೂರಿನ ಎಲ್ಲಾ ಸಿಗ್ನಲ್ ಲೈಟ್‌ಗಳ ಸ್ಥಳದಲ್ಲಿ ವಾಹನ ಸವಾರರು ಅನುಭವಿಸುವ ಕಿರಿಕಿರಿಯಾಗಿದೆ. ತಂತ್ರಜ್ಞಾನ, ಇಷ್ಟು ಮುಂದುವರಿದಿದ್ದರೂ ಮಳೆ ಬಂದಾಗ, ಸಿಗ್ನಲ್ ಲೈಟ್‌ಗಳು, ಸ್ವಯಂ ಚಾಲಿತವಾಗಿ ಆಫ್ ಆಗುವ ವ್ಯವಸ್ಥೆ ಮೈಸೂರಿಗೆ ಇನ್ನೂ ಬಂದಿಲ್ಲವೇಕೆ? ಈ ರೀತಿ ಮಳೆ ಬಂದಾಗ ಹತ್ತಿರದಲ್ಲೇ ಇರುವ ಪೊಲೀಸ್ ಠಾಣೆಯ ಸಿಬ್ಬಂದಿ ಬಂದು ಈ ಸಿಗ್ನಲ್ ಲೈಟ್‌ಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವ ಗೋಜಿಗೂ ಹೋಗುವುದಿಲ್ಲ.
ಕೆಲವು ವರ್ಷಗಳ ಹಿಂದೆ, ಮೈಸೂರಿನಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ಎಂ. ಎ. ಸಲೀಂ ಅವರ ಗಮನಕ್ಕೆ ತಂದಾಗ, ತಕ್ಷಣವೇ ಸ್ಪಂದಿಸಿ, ಸಿಗ್ನಲ್ ಲೈಟ್‌ಗಳು ಇರುವ ಸರ್ಕಲ್‌ನ ಸಮೀಪದ ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ನಿರ್ದೇಶನ ನೀಡಿದ್ದರು. ಹಾಲಿ ಇರುವ ಪೊಲೀಸ್ ಆಯುಕ್ತರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು,
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು




