Mysore
20
scattered clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಓದುಗರ ಪತ್ರ | ಸಿದ್ದರಾಮಯ್ಯನವರ ಹೆಸರಿಡುವುದು ಸೂಕ್ತ

ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಲಕ್ಷಿ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಮೇಟಗಳ್ಳಿ ರಾಯಲ್ ಇನ್ ಜಂಕ್ಷನ್‌ವರೆಗಿನ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಬೇಕು ಎಂಬ ಚರ್ಚೆ ಆರಂಭವಾಗಿದೆ. ಈ ರಸ್ತೆಗೆ ಸಿದ್ದರಾಮಯ್ಯರವರ ಹೆಸರಿಡ ಬೇಕು ಎನ್ನುವ ಸಂಬಂಧ ಮಹಾನಗರ ಪಾಲಿಕೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಗೆ ಪರ-ವಿರೋಧ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ರವರ ಹೆಸರಿಟ್ಟರೆ ತಪ್ಪೇನು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿರುವುದು ಆಶ್ಚರ್ಯ ತಂದಿದೆ.

ಹೌದು ಮೂಲತಃ ಮೈಸೂರಿನವರೇ ಆಗಿರುವ, ಸುದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಮೈಸೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಸಿದ್ದರಾಮಯ್ಯನವರ ಹೆಸರಿಡುವುದರಲ್ಲಿ ತಪ್ಪಿಲ್ಲ. ಅವರ ಸಾಧನೆಯನ್ನು ಗುರುತಿಸುವ ವಿಚಾರದಲ್ಲಿ ಪಕ್ಷಬೇಧ ಮಾಡಬಾರದು. ಸಿದ್ದರಾಮಯ್ಯನವರು ಸೈದ್ಧಾಂತಿಕವಾಗಿ ರಾಜಕೀಯದಲ್ಲಿ ವಿರೋಽಗಳನ್ನು ಹೊಂದಿದ್ದರೂ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಅಂತಹವರ ಹೆಸರನ್ನು ಮೈಸೂರಿನ ಒಂದು ರಸ್ತೆಗೆ ಇಡುವುದು ಸೂಕ್ತವೆನಿಸುತ್ತದೆ. ಸಾರ್ವಜನಿಕರು ಪಕ್ಷಬೇಧ ಮರೆತು ಕೆಆರ್‌ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಡಲು ಸಹಕರಿಸಬೇಕು.
-ಎಚ್. ವಿ. ಮನೋಜ್, ಹೊಸಮಾಳ, ಎಚ್. ಡಿ. ಕೋಟೆ ತಾ.

Tags: